ರಾಜಕೀಯ

ರಾಹುಲ್ ಫ್ಲಾಯಿಂಗ್ ಕಿಸ್ ಗೆ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಆಕ್ರೋಶ

Views: 0

ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಫ್ಲಾಯಿಂಗ್ ಕಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗರಂ ಆಗಿದ್ದು. ಈ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ.

ಸ್ಮೃತಿ ಇರಾನಿ ಆಕ್ರೋಶ ಹೊರಹಾಕಿ ಸ್ತ್ರೀ ದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳೆ ಸಂಸದರಿಗೆ ಫ್ಲಾಯಿಂಗ್ ಕಿಸ್ ನೀಡಬಹುದು. ಇದು ಅವರ ಕುಟುಂಬ ಮತ್ತು ಪಕ್ಷ ಮಹಿಳೆಯರ ಬಗ್ಗೆ ಹೊಂದಿರುವ ಭಾವನೆಯನ್ನು ತೋರಿಸುತ್ತದೆ. ಇಂತಹ ಅಮಾನವೀಯ ನಡವಳಿಕೆಯನ್ನು ದೇಶದ ಸಂಸತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಆಕ್ರೋಶದಿಂದ ಮಾತನಾಡಿ, ಇದು ಸಂಸದರೊಬ್ಬರ ಅನುಚಿತ ಮತ್ತು ಅಸಭ್ಯ ವರ್ತನೆ ಭಾರತ ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ನಡೆದಿಲ್ಲ. ಇದರ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

Related Articles

Back to top button
error: Content is protected !!