ಯುವಜನ

ಅರೋಗ್ಯ ಇಲಾಖೆಯಿಂದ ಪದವಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯ ಯಾಕೆ?

Views: 51

ಕನ್ನಡ ಕರಾವಳಿ ಸುದ್ದಿ : ರಾಜ್ಯದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯವಾಗಿ ಮಾಡಬೇಕೆಂದು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಯುವ ಜನರಲ್ಲಿ HIV ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರೋಗ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಯುವ ಜನರಲ್ಲಿ HIV ಸೋಂಕಿನ ಪ್ರಮಾಣ ಹೆಚ್ಚಾಗ್ತಿದೆ. ಹೀಗಾಗಿ ಆರಂಭಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ, ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿದ್ದು, ಈ ವಿಶೇಷ ಅಭಿಯಾನಕ್ಕೆ ವಿದ್ಯಾರ್ಥಿಗಳು ಸಹಕರಿಸುವಂತೆ ಮನವಿ ಮಾಡಿದೆ.

ರಾಜ್ಯದಲ್ಲಿ HIV ಸೋಂಕಿನಿಂದ ಸುಮಾರು 2.60 ಲಕ್ಷ ಮಂದಿ ಬಳಲುತ್ತಿದ್ದು, 2.05 ಲಕ್ಷ ಮಂದಿ ಆ್ಯಂಟಿ ರೆಟ್ರೋ ವೈರಲ್ ಥೆರಪಿ ಪಡೆಯುತ್ತಿದ್ದಾರೆ. ಈ ಸೋಂಕು ಅತಿ ಹೆಚ್ಚು 18-35 ವರ್ಷದವರೊಳಗೆ ಕಾಣಿಸಿಕೊಂಡಿರೋದು ಆತಂಕದ ವಿಷಯವಾಗಿದೆ. 18 ರಿಂದ 25 ವರ್ಷದ ಸುಮಾರು 7 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ಇರುವುದೇ ತಿಳಿದಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ರಾಜ್ಯದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯ ಮಾಡಲು ನಿರ್ಧರಿಸಿದೆ.

ವಿದ್ಯಾರ್ಥಿಗಳ ಗೌಪ್ಯತೆ ಕಾಪಾಡುವ ಉದ್ದೇಶದಿಂದ ನಿಮ್ಮ ಹೆಚ್‌ಐವಿ ಸ್ಥಿತಿ ತಿಳಿದುಕೊಳ್ಳಿ’ ಎಂಬ QR ಕೋಡ್ ಜಾರಿ ಮಾಡಲಾಗಿದೆ. ಈ QR ಕೋಡ್ ಮೂಲಕ ವಿದ್ಯಾರ್ಥಿಗಳು ತಾವೇ ಸ್ಕ್ಯಾನ್ ಮಾಡಿ ವರದಿ ನೋಡಬಹುದು. ಹೆಚ್‌ಐವಿ ಸೋಂಕನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡುವುದು ಹಾಗೂ ಜಾಗೃತಿ ಮೂಡಿಸುವ ಉದ್ದೇಶ ದಿಂದ VTU ಹಾಗೂ ಪದವಿ ಕಾಲೇಜುಗಳಲ್ಲಿ ಹೆಲ್ತ್ ಕ್ಯಾಂಪ್‌ಗಳು ಮಾಡಲು ನಿರ್ಧಾರ ಮಾಡಲಾಗಿದೆ. VTU ಸಂಯೋಜಿತ ಕಾಲೇಜು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಕೊಡೋಕೆ ಆರೋಗ್ಯ ಇಲಾಖೆ ಸೂಚಿಸಿದೆ.

ಪದವಿ ಕಾಲೇಜುಗಳಲ್ಲಿ 3 ಲಕ್ಷ ಹಾಗೂ ವಿಟಿಯು ಕಾಲೇಜಿನ ನಾಲ್ಕು ಲಕ್ಷ ವಿದ್ಯಾರ್ಥಿಗಳನ್ನು ತಲುಪಿ ಆರಂಭಿಕ ಹಂತದಲ್ಲೇ ಸೋಂಕು ಪತ್ತೆ ಹಚ್ಚ ಟ್ರೇಟೆಂಟ್ ಕೊಡಬೇಕೆಂದು ನಿರ್ಧರಿಸಲಾಗಿದೆ. ಈಗಿನಿಂದ ಮುಂದಿನ ವರ್ಷ ಫೆಬ್ರವರಿವರೆಗೂ ಬೀದಿ ನಾಟಕ, ಕ್ವಿಜ್ ಸೇರಿ ಹಲವು ಮಾರ್ಗಗಳಲ್ಲಿ ಜಾಗೃತಿ ಮೂಡಿಸಲು ಪ್ಲಾನ್ ಮಾಡಲಾಗಿದೆ

Related Articles

Back to top button
error: Content is protected !!