ಇತರೆ

ಮತ್ಯಗಂಧ ರೈಲಿನ ಅಂಗವಿಕಲರ ಬೋಗಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

Views: 10

ಕನ್ನಡ ಕರಾವಳಿ ಸುದ್ದಿ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್ ಫಾರಂ 4ರಲ್ಲಿ ಬಂದ ಮತ್ಯಗಂಧ ರೈಲಿನ ಅಂಗವಿಕಲರ ಬೋಗಿಯಲ್ಲಿ ಸುಮಾರು 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ.

ನಿಲ್ದಾಣಕ್ಕೆ ಬಂದ ರೈಲಿನಲ್ಲಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆಯಾಗಿದ್ದರು. ಆಗ ಸ್ಥಳಕ್ಕೆ ರೈಲ್ವೇ ಮೆಡಿಕಲ್ ಅಧಿಕಾರಿ ಗಳು ಭೇಟಿ ನೀಡಿ ಪರಿಶೀಲಿಸಿ ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಮಂಗಳೂರು ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿ ಸುಮಾರು 4.5 ಅಡಿ ಎತ್ತರ, ಎರಡೂ ಕಾಲುಗಳು ಮೊಣಕಾಲಿನ ಕೆಳಭಾಗ ತುಂಡಾಗಿದೆ. ಸಾಧಾರಣ ಮೈಕಟ್ಟು ಗುಂಡು ಮುಖ ಇದೆ. ಬಲ ಕೈನಲ್ಲಿ ‘ಪೂಜಾರಿ ಅನಿಲ್’ ಎಂದು ಹಚ್ಚೆ ಇದೆ. ಮೃತನ ಬಳಿ ಇದ್ದ ಕೋಲ್ಕತ್ತಾ, ಮುಂಬಯಿ ಮಾಲಾಡ್ ಚಿಕ್ಕ ಪುಸ್ತಕದಲ್ಲಿ ಅನಿಲ್ ಮಾರುತಿ, ಈಸ್ಟ್ ಮತ್ತು ಜಾಮ್ ರುಷಿ ನಗರ್ ಎಂದು ಬರೆಯಲಾಗಿದೆ.

ಮೃತದೇಹದ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!