ಯುವಜನ

ಮದುವೆಯಾಗುವಂತೆ ಬೆದರಿಕೆ ಹಾಕಿದ ಮರುದಿನವೇ ಕಾಲೇಜು ವಿದ್ಯಾರ್ಥಿನಿಯ ಗುಂಡಿಕ್ಕಿ ಹತ್ಯೆ

Views: 46

ಕನ್ನಡ ಕರಾವಳಿ ಸುದ್ದಿ: 12ನೇ ತರಗತಿ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಿಹಾರದ ಸಮಸ್ತಿಪುರದ ಕೈಜಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉಮೇಶ್‌ ಠಾಕೂರ್‌ ಅವರ ಪುತ್ರಿ ಸೋನಮ್‌ ಕುಮಾರಿ ಹತ್ಯೆಯಾದ ಯುವತಿ.

ಕಸ್ತೂರ್ಬಾ ವಿದ್ಯಾಲಯ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದವರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಹಿಂದಿನ ಆಕೆಗೆ ಬೆದರಿಕೆ ಹಾಕಲಾಗಿತ್ತು. ಪೊಲೀಸರು ಕೊಲೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ನಾಲ್ಕು ಗುಂಡುಗಳು ಸ್ಥಳದಲ್ಲಿ ಪತ್ತೆಯಾಗಿದೆ.

ನನ್ನ ಮಗಳು ಯುವಕನೊಬ್ಬನ ಜೊತೆ ಸಂಪರ್ಕದಲ್ಲಿದ್ದಳು. ಅವನೇ ಗುಂಡಿಕ್ಕಿ ಕೊಂದಿದ್ದಾನೆ. ಅಲ್ಲದೇ ಆಕೆಯ ಕೊಲೆಗೆ ಒಂದು ದಿನದ ಮೊದಲು ಆರೋಪಿಯು ತನ್ನನ್ನು ಮದುವೆಯಾಗುವಂತೆ ಯುವತಿಗೆ ಹೇಳಿ ಬೆದರಿಕೆ ಹಾಕಿರುವುದಾಗಿ ಆರೋಪ ಮಾಡಿದ್ದಾರೆ.

ಪೊಲೀಸರು ಆರೋಪಿಯನ್ನು ಶೀಘ್ರದಲ್ಲಿಯೇ ಬಂಧನ ಮಾಡಲಾಗುವುದು ಎಂದು ಹೇಳಿದ್ದಾರೆ.

Related Articles

Back to top button
error: Content is protected !!