ವಕ್ವಾಡಿ 8 ಸ್ಟಾರ್ ಕ್ರಿಕೆಟರ್ಸ್ ಪ್ರಾಯೋಜಿತ ‘ಆಶ್ರಯ ಧಾಮ’ ಲೋಕಾರ್ಪಣೆ

Views: 0
ಕುಂದಾಪುರ ತಾಲೂಕಿನ ವಕ್ವಾಡಿ ತೆಂಕಬೆಟ್ಟು ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ಚಿಕ್ಕು ದೇವಸ್ಥಾನದ ಎದುರಿನ ಆಟದ ಮೈದಾನದಲ್ಲಿ 8 ಸ್ಟಾರ್ ಕ್ರಿಕೆಟರ್ಸ್ ಪ್ರಾಯೋಜಕತ್ವದಲ್ಲಿ ಸಾರ್ವಜನಿಕರಿಗೆ ‘ಆಶ್ರಯ ಧಾಮ’ ವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.

ಆಡಳಿತ ಮೊಕ್ತೇಸರರಾದ ಶ್ರೀ ಬಾಲಕೃಷ್ಣ ಶೆಟ್ಟಿ ಅವರು ಉದ್ಘಾಟಿಸಿದರು.
ಶ್ರೀ ಬ್ರಹ್ಮಲಿಂಗೇಶ್ವರ ಯುವಕ ಮಂಡಲದ ಮಾಜಿ ಅಧ್ಯಕ್ಷ ಕನ್ನಾಲಿ ಮನೆ ಆನಂದ ಶೆಟ್ಟಿ ಅವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಶ್ರಯ ಧಾಮದ ಪ್ರಾಯೋಜಕ 8 ಸ್ಟಾರ್ ಕ್ರಿಕೆಟರ್ಸ್ ನಿರ್ಗಮಿತ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಶೆಟ್ಟಿ ಅವರನ್ನು ಅಧ್ಯಾಪಕ ಪುರಾಣೆಬೈಲು ರಮೇಶ್ ಶೆಟ್ಟಿ ಅವರು ಸನ್ಮಾನ ನೀಡಿ ಗೌರವಿಸಿದರು.

ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಹೊಸಮನೆ, ಉದಯ್ ಕುಮಾರ್ ಹೆಗ್ಡೆ ಕುಂದಾಪುರ ಮನೆ, ಉಪನ್ಯಾಸಕ ಸುಧಾಕರ ವಕ್ವಾಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಆದರ್ಶ ಶೆಟ್ಟಿ ಅವರನ್ನು ಸ್ವಾಗತಿಸಿಕೊಳ್ಳಲಾಯಿತು.
ಗಣೇಶ್ ಶೆಟ್ಟಿ, ಭರತ್ ಶೆಟ್ಟಿಗಾರ್, ಪ್ರಥಮ ಶೆಟ್ಟಿ, ಸುರೇಂದ್ರ ಶೆಟ್ಟಿಗಾರ್, ಸುಜಿತ್ ಶೆಟ್ಟಿ,ಅಕ್ಕಯ್ಯ ಶೆಡ್ತಿ, ಸುಧಾಕರ್ ಆಚಾರ್ಯ ಅವರು ಅತಿಥಿಗಳನ್ನು ಗೌರವಿಸಿದರು.
ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೋಹಿತ್ ಗಿಣಿ ಸ್ವಾಗತಿಸಿ, ವಂದಿಸಿದರು.






