ಇತರೆ

ಬ್ರಹ್ಮಾವರ: ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ, ಇಬ್ಬರು ಅರೆಸ್ಟ್

Views: 80

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಕಲ್ಲುಗೊಳಿ ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸುಕೇಶ್ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಎಂದು ಗುರುತಿಸಲಾಗಿದೆ. ಉಳಿದವರು ಪರಾರಿಯಾದ್ದರೆ.

ಬ್ರಹ್ಮಾವರ ತಾಲೂಕು 34ನೇ ಕುದಿ ಗ್ರಾಮದ ನುಕ್ಕೂರು ಎಂಬಲ್ಲಿ ಕಲ್ಲುಗೊಳಿ ಸರ್ಕಾರಿ ಹಾಡಿಯಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದಾಗ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರು  ಓಡಿ ಹೋಗಿರುತ್ತಾರೆ. ಆಗ ಸಿಬ್ಬಂದಿಯವರು ಸುಕೇಶ ಶೆಟ್ಟಿ ಮತ್ತು ಪ್ರತಾಪ ಶೆಟ್ಟಿ ಇಬ್ಬರನ್ನು ಹಿಡಿದಿದ್ದು, ಉಳಿದ ವಿಜಯ ನಾಯ್ಕ್‌ ಮುದ್ದುಮನೆ, ಗಣೇಶ ಬೆಳ್ವೆ, ಬಾಲಕೃಷ್ಣ ಕೀರಾಡಿ, ಹಾಗೂ ಇತರ ಇಬ್ಬರು ಹಾಡಿಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ.

ಸುಕೇಶ ಶೆಟ್ಟಿ, 34 ನೇ ಕುದಿ ಮತ್ತು ಪ್ರತಾಪ ಶೆಟ್ಟಿ, ಕಾಡೂರು ಇವರನ್ನು ವಶಕ್ಕೆ ಪಡೆದು ಆರೋಪಿಗಳಿಂದ ಅಂದರ್-ಬಾಹರ್‌ ಆಟಕ್ಕೆ ಬಳಸಿದ ತಲಾ ಒಟ್ಟು ನಗದು ರೂಪಾಯಿ 21,700/-, ಇಸ್ಪೀಟು ಎಲೆಗಳು, ಕಂದು ಬಣ್ಣದ ಬೆಡ್‌ ಶೀಟ್‌-1, MH-05-FP-6501, KA-19-P-7890 ನಂಬ್ರದ ಕಾರುಗಳು ಮತ್ತು KA-20-HD-2299 ನಂಬ್ರದ ಸ್ಕೂಟರ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ ಒಟ್ಟು ರೂಪಾಯಿ 6,20,000/- ಮೌಲ್ಯದ ವಾಹನಗಳನ್ನು ಮತ್ತು ನಗದು 21,700/- ರೂಪಾಯಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!