ಸಾಮಾಜಿಕ

ಮುಂಬಯಿ ಪದ್ಮಶಾಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಮತ್ತು ಶಾಲಾ ಬ್ಯಾಗ್‌ ವಿತರಣೆ

Views: 218

ಕನ್ನಡ ಕರಾವಳಿ ಸುದ್ದಿ: ಹರ್ಷ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಜೂ. 21ರ ಆದಿತ್ಯವಾರದಂದು ಪದ್ಮಶಾಲಿ ಸಮಾಜ ಸೇವಾ ಸಂಘ, ಪದ್ಮ ಶಾಲಿ ಎಜ್ಯುಕೇಶನ್ ಸೊಸಾಟಿ, ಪದ್ಮಶಾಲಿ ಮಹಿಳಾ ಬಳಗ ಹಾಗೂ ಪದ್ಮಶಾಲಿ ಯುವ ವಂದ್ಯದ ಸಹಕಾರದಿಂದ ಸಮಾಜದ ಬಡ ವಿದ್ಯಾರ್ಥಿ ಗಳಿಗೆ ಉಚಿತ ಪುಸ್ತಕ ನೀಡುವ ಕಾರ್ಯಕ್ರಮವು ಪದ್ಮಶಾಲಿ ಕಲಾ ಭವನ, ಘೋಡ್‌ ಬಂದರ್, ಥಾಣೆ ಇಲ್ಲಿ ಬಹಳ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.

ಹರ್ಷ ಫೌಂಡೇಶನ್ ಟ್ರಸ್ಟಿಯಾದ ಹರ್ಷ್ ಶೆಟ್ಟಿಗಾರರ ಹುಟ್ಟುದಿನವನ್ನು ಹರ್ಷೋಲ್ಲಾಸದಿಂದ ಆಚರಿಸಿ ಅವರಿಗೆ ಶುಭಾಶಯವನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗು ಅವರ ಪಾಲಕ ಪೋಷಕರನ್ನು ಆದರದಿಂದ ಸ್ವಾಗತಿಸಿ ವಂದಿಸಿದರು. 60ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ಪಾಲಕ ಪೋಷಕರೊಂದಿಗೆ ಪಾಲ್ಗೊಂಡು ಈ ಕಾರ್ಯಕ್ರಮದ ಲಾಭವನ್ನು ಪಡೆದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್, ಕಾರ್ಯದರ್ಶಿ ಕೇಶವ್ ಶೆಟ್ಟಿಗಾರ್, ಸೊಸಾಟಿಯ ಸಭಾಪತಿಯವರಾದ ಶಿವಾನಂದ ಶೆಟ್ಟಿಗಾರ್, ಕಾರ್ಯದರ್ಶಿ ರಮೇಶ್ ಶೆಟ್ಟಿಗಾರ್, ಮಹಿಳಾ ಬಳಗದ ಪ್ರಮುಖ ಪ್ರಮೀಳಾ ಎಂ. ಶೆಟ್ಟಿಗಾ‌ರ್, ಕಾರ್ಯದರ್ಶಿ ತಾರಾ ಶೆಟ್ಟಿಗಾರ್, ಯುವ ವೇದಿಕೆಯ ಅಧ್ಯಕ್ಷೆಯಾದ ದಿವ್ಯಾ ಶೆಟ್ಟಿಗಾರ್, ಪದ್ಮ ಶಾಲಿ ಕಲಾ ಭವನ ಕಾರ್ಯಾಧ್ಯಕ್ಷ ಉತ್ತಮ್ ಎ. ಶೆಟ್ಟಿಗಾರ್,ಮಹಿಳಾ ಬಳಗದ ನಿಕಟಪೂರ್ವ ಪ್ರಮುಖ ಸರೋಜಿನಿ ಶೆಟ್ಟಿಗಾರ್ ಮತ್ತು ಹರ್ಷ ಫೌಂಡೇಶನಿನ ಟ್ರಸ್ಟಿ ಕಾಂತಿ ಕೆ. ಶೆಟ್ಟಿಗಾರ್ ಉಪಸ್ಥಿತರಿದ್ದರು.

ಕೃಷ್ಣಾನಂದ ಎಮ್. ಶೆಟ್ಟಿಗಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಹಾಗೂ ಪಾಲಕರನ್ನು ಉದ್ದೇಶಿಸಿ ಹಿತ ವಚನಗಳ ನುಡಿಯನ್ನು ನೀಡಿ ನಮ್ಮ ಸಮಾಜದವರಿಗೆ ಹಣದ ಕೊರತೆಯಿದ್ದರೂ ವಿದ್ಯಾರ್ಥಿಯರಿಗೆ ಶಿಕ್ಷಣದ ಕೊರತೆ ಆಗಬಾರದೆಂದು ನಾವು ಸದಾ ಪ್ರಯತ್ನ ಮಾಡುತ್ತಿರುತ್ತೇವೆ ಎಂದರು. ಇನ್ನು ಮುಂದಕ್ಕೂ ವಿದ್ಯಾಭ್ಯಾಸಕ್ಕೆ ಏನಾದರೂ ಸಹಾಯಬೇಕಾದರೆ ತನ್ನನ್ನು ಸಂಪರ್ಕಿಸಬಹುದೆಂದು ಆಶ್ವಾಸನೆಯನ್ನಿತ್ತರು ಹಾಗೂ ಮುಂದೆ ಯಶಸ್ವಿಯಾಗಿ ಸಮಾಜ ಸೇವೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು. ಶಿವಾನಂದ ಶೆಟ್ಟಿಗಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮುಂದೆ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ರೀತಿಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಕೀರ್ತಿ ತರಬೇಕೆಂದು ಆಶಿಸಿದರು

Related Articles

Back to top button
error: Content is protected !!