ಆರ್ಥಿಕ

ಶೀಘ್ರದಲ್ಲೇ ಭಾರತೀಯ ರೈಲ್ವೆ ಇಲಾಖೆಯಲ್ಲಿ 4098 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್.!

Views: 24

ಕನ್ನಡ ಕರಾವಳಿ ಸುದ್ದಿ : ರೈಲ್ವೆ ಮಂಡಳಿಯು ಜೂನಿಯರ್ ಇಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಮತ್ತು ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದೆ.

ಈ ನೇಮಕಾತಿ ಪ್ರಕ್ರಿಯೆಯು 2026 ರಲ್ಲಿ ನಡೆಯಲಿದ್ದು, ರೈಲ್ವೆ ಮಂಡಳಿಯು ಎಲ್ಲಾ ವಲಯ ರೈಲ್ವೆ ಮತ್ತು ಉತ್ಪಾದನಾ ಘಟಕಗಳಿಗೆ ಮಂಜೂರಾದ ಹುದ್ದೆಗಳ ವಿವರಗಳನ್ನು ಕಳುಹಿಸಿದೆ.

ರೈಲ್ವೆ ಮಂಡಳಿಯ ಪತ್ರದ ಪ್ರಕಾರ, ಒಟ್ಟು 4,098 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಅತಿ ಹೆಚ್ಚು ಹುದ್ದೆಗಳು ಜೆಇ (PWI) ವಿಭಾಗದಲ್ಲಿದ್ದು, ಒಟ್ಟು 845 ಹುದ್ದೆಗಳಿವೆ. ಉಳಿದಂತೆ ಪ್ರಮುಖ ಹುದ್ದೆಗಳ ವಿವರ ಇಂತಿದೆ:

ಜೂನಿಯರ್ ಇಂಜಿನಿಯರ್ (ವರ್ಕ್ಸ್): 470 ಹುದ್ದೆಗಳು

ಜೂನಿಯರ್ ಇಂಜಿನಿಯರ್ (ಕ್ಯಾರೇಜ್ ಅಂಡ್ ವ್ಯಾಗನ್): 450 ಹುದ್ದೆಗಳು

ಜೂನಿಯರ್ ಇಂಜಿನಿಯರ್ (ವರ್ಕ್‌ಶಾಪ್-ಮೆಕ್ಯಾನಿಕಲ್): 436 ಹುದ್ದೆಗಳು

ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS): 314 ಹುದ್ದೆಗಳು

ಜೆಇ (ಪಿ-ವೇ) ಮತ್ತು ಜೂನಿಯರ್ ಇಂಜಿನಿಯರ್ (TRS): ತಲಾ 163 ಹುದ್ದೆಗಳು

ಜೂನಿಯರ್ ಇಂಜಿನಿಯರ್ (TRD): 82 ಹುದ್ದೆಗಳು

ಜೂನಿಯರ್ ಇಂಜಿನಿಯರ್ (ಟ್ರ್ಯಾಕ್ ಮೆಷಿನ್): 49 ಹುದ್ದೆಗಳು

ಜೂನಿಯರ್ ಇಂಜಿನಿಯರ್ (ಬ್ರಿಡ್ಜ್): 46 ಹುದ್ದೆಗಳು

ಈ ಎಲ್ಲಾ ಹುದ್ದೆಗಳು ಪೇ ಲೆವೆಲ್-6 (Pay Level-6) ಅಡಿಯಲ್ಲಿ ಬರಲಿದ್ದು, ರೈಲ್ವೆ ನೇಮಕಾತಿ ಮಂಡಳಿ (RRB) ವತಿಯಿಂದ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಅವಕಾಶ

ಮಂಜೂರಾದ ಹುದ್ದೆಗಳಲ್ಲಿ ಎಲೆಕ್ಟ್ರಿಕಲ್, ಸಿವಿಲ್, ಮೆಕ್ಯಾನಿಕಲ್, ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಶನ್ (S&T) ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳ ಜೂನಿಯರ್ ಇಂಜಿನಿಯರ್ ಹುದ್ದೆಗಳು ಸೇರಿವೆ. ಎಲೆಕ್ಟ್ರಿಕಲ್ ವಿಭಾಗದಲ್ಲಿ ಡಿಸೈನ್ ಅಂಡ್ ಡ್ರಾಯಿಂಗ್, ಟಿಆರ್‌ಎಸ್, ಜನರಲ್ ಸರ್ವಿಸ್ ಮುಂತಾದ ಕ್ಷೇತ್ರಗಳಿದ್ದರೆ, ಸಿವಿಲ್ ವಿಭಾಗದಲ್ಲಿ ಬ್ರಿಡ್ಜ್, ಪಿ-ವೇ, ವರ್ಕ್ಸ್, ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಹುದ್ದೆಗಳಿವೆ. ಮೆಕ್ಯಾನಿಕಲ್ ಮತ್ತು ಎಸ್‌ಆಂಡ್‌ಟಿ ವಿಭಾಗಗಳಲ್ಲೂ ವಿವಿಧ ಶ್ರೇಣಿಯ ಹುದ್ದೆಗಳನ್ನು ಒಳಗೊಂಡಿದ್ದು, ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳೂ ಈ ನೇಮಕಾತಿಯ ಭಾಗವಾಗಿರಲಿವೆ.

ಜುಲೈ 28 ರಂದು ಆರ್‌ಆರ್‌ಬಿ ಎಎಲ್‌ಪಿ ಸಿಬಿಟಿ-2 ಪರೀಕ್ಷೆ

ರೈಲ್ವೆ ನೇಮಕಾತಿ ಮಂಡಳಿಯು (RRB) ಅಸಿಸ್ಟೆಂಟ್ ಲೋಕೊ ಪೈಲಟ್ (ALP) ಹುದ್ದೆಯ ಕಂಪ್ಯೂಟರ್ ಆಧಾರಿತ ಎರಡನೇ ಹಂತದ ಪರೀಕ್ಷೆಯ (CBT-2) ತಾತ್ಕಾಲಿಕ ದಿನಾಂಕವನ್ನು ಘೋಷಿಸಿದೆ. ಈ ಪರೀಕ್ಷೆಯು ಜುಲೈ 28 ರಂದು ನಡೆಯಲಿದೆ.

ಅಭ್ಯರ್ಥಿಗಳು ಪರೀಕ್ಷಾ ದಿನಾಂಕಕ್ಕಿಂತ 10 ದಿನಗಳ ಮುಂಚಿತವಾಗಿ ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಪರೀಕ್ಷಾ ನಗರ ಮತ್ತು ದಿನಾಂಕದ ವಿವರಗಳನ್ನು ಪರಿಶೀಲಿಸಬಹುದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಇದೇ ಲಿಂಕ್‌ನಿಂದ ಪ್ರಯಾಣದ ಪಾಸ್ (Travel Authority) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇ-ಕಾಲ್ ಲೆಟರ್‌ಗಳು (ಪ್ರವೇಶ ಪತ್ರ) ಪರೀಕ್ಷೆಗೆ ನಾಲ್ಕು ದಿನ ಮುಂಚಿತವಾಗಿ ಲಭ್ಯವಾಗಲಿವೆ.

Related Articles

Back to top button
error: Content is protected !!