ಕೋಟ ವಿವೇಕ ಪದವಿಪೂರ್ವ ಕಾಲೇಜು: ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
Views: 87
ಕನ್ನಡ ಕರಾವಳಿ ಸುದ್ದಿ: ವಿವೇಕ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ನಿವೃತ್ತ ಪ್ರಾಂಶುಪಾಲರಾದ ಶ್ರೀ ಪಿ. ಲಕ್ಷ್ಮೀನಾರಾಯಣ ತುಂಗ, ಐರೋಡಿ ಸಾಸ್ತಾನ ಇವರು ಆಗಮಿಸಿ, ದೀಪ ಪ್ರಜ್ವಲಗೊಳಿಸಿ, ಮತನಾಡಿ ‘ಒಂದು ದೇಶದ ಸಂಸತ್, ಆ ದೇಶವನ್ನು ಮುನ್ನೆಡುಸುವಲ್ಲಿ ಹೇಗೆ ಸಹಕಾರಿಯೋ, ಹಾಗೇ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಸತ್ ಕೂಡ ವಿದ್ಯಾರ್ಥಿಗಳ ಎಲ್ಲಾ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನೆಡಸಲು ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲೇ ಸಂಸತ್ತಿನ ರಚನೆ, ಅದರ ಕಾರ್ಯ ವೈಖರಿಗಳನ್ನು, ಅದರೆ ಶಿಸ್ತನ್ನು ತಿಳಿದು ಸಾಗಿದಲ್ಲಿ ಮುಂದೆ ಉತ್ತಮ ನಾಯಕನಾಗಲು ಸಾಧ್ಯ ಎಂದು ತಿಳಿಸಿ, ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಪ್ರಾಮಾಣಿಕ ಆದರ್ಶ ನಾಯಕರಾಗಬೇಕೆಂದು ಕರೆಯಿತ್ತರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ವಿದ್ಯಾರ್ಥಿ ಸರಕಾರದ ವಾಕ್ಷತಿ, ಉಪವಾಕ್ಷತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲಾ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು.
ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕರಾದ ಶ್ರೀ ಪ್ರೇಮಾನಂದ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿ ಸರಕಾರದ ವಾಕ್ಷತಿಯಾಗಿ, ಕುಮಾರಿ ಅದಿತಿ, ಉಪವಾಕ್ಷತಿಯಾಗಿ ಹೈಸ್ಕೂಲಿನ ಆರುಷ್ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ತಿನ ಸಂಚಾಲಕ ಉಪನ್ಯಾಸಕ ಶ್ರೀ ಗಣೇಶಕುಮಾರ್ ಶೆಟ್ಟಿ ಹಾಗೂ ಶಿಕ್ಷಕಿ ಶ್ರೀಮತಿ ರತಿ ಬಾಯಿ ಶ್ರೀ ಸುವೀರ್ ಹೊಳ್ಳ ಮಾರ್ಗದರ್ಶನ ನೀಡಿ, ಕಾರ್ಯಕ್ರಮ ಸಂಯೋಜಿಸಿದ್ದರು.
ಸರಕಾರ ಮುಖ್ಯಮಂತ್ರಿ ನಿಶಾಂತ್ ಕಿಣಿ, ಅತಿಥಿಗಳನ್ನು ಸ್ವಾಗತಿಸಿದರು. ಉಪಮುಖ್ಯಮಂತ್ರಿ ‘ಪ್ರಥಮ್’ ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಪ್ರಾಪ್ತಿ ಕಾರ್ಯಕ್ರಮ ನಿರ್ವಹಿಸಿದರು.






