ಯುವಜನ
ಪೋಷಕರು ಮೊಬೈಲ್ ತೆಗೆಸಿಕೊಡಲು ಹಿಂದೇಟು:ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ
Views: 128
ಕನ್ನಡ ಕರಾವಳಿ ಸುದ್ದಿ: ಮೊಬೈಲ್ ಕೊಡಿಸದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ವೀಪುಗುರಿಯ ನಿವಾಸಿ ಪೃಥ್ವಿಕಾ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಪಿಯುಸಿ ಮುಗಿಸಿ ಮಂಗಳೂರಿನಲ್ಲಿ ಪದವಿ ಕೋರ್ಸ್ ಗೆ ಸೇರಿದ್ದ ಪೃಥ್ವಿಕಾ ತನ್ನ ಪೋಷಕರ ಬಳಿ ಮೊಬೈಲ್ ಫೋನ್ ಖರಿದೀಸುವಂತೆ ಕೇಳಿಕೊಂಡಿದ್ದಾಳೆ. ಅದರಂತೆ ತಂದೆ ಮೊಬೈಲ್ ಖರಿದೀಸಲು ಮುಂದಾಗಿದ್ದರು.
ಆದ್ರೆ ತಾಯಿ ಮಗಳಿಗೆ ಇಷ್ಟು ಬೇಗ ಫೋನ್ ಅಗತ್ಯವಿಲ್ಲ ಎಂದು ಮೊಬೈಲ್ ತೆಗೆದುಕೊಡಲು ಹಿಂದೇಟು ಹಾಕಿದ್ದಾರೆ. ಇದರಿಂದಾಗಿ ಬಾಲಕಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಈ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ಪೊಲೀಸರು ಅಸ್ವಾಭಾವಿಕ ಮರಣದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.






