ಇತರೆ

ಭೀಕರ ರಸ್ತೆ ಅಪಘಾತ; ವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ, ಮಹಿಳೆ ದಾರುಣ ಸಾವು

Views: 78

ಕನ್ನಡ ಕರಾವಳಿ ಸುದ್ದಿ:ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸಮೀಪ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ನಡೆದಿದೆ.

ಯಲಹಂಕ–ಹಿಂದೂಪುರ ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಪೆಟ್ರೋಲ್ ಬಂಕ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರಂತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಕಾರು ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದಲ್ಲಿ ಮಹಿಳೆಯ ಪತಿ ಮತ್ತು ಪುತ್ರಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ರಾಮಾಂಜನೇಯಲು (50), ಅವರ ಪತ್ನಿ ಅನಿತಾ (42) ಹಾಗೂ ಪುತ್ರಿ ವೈಷ್ಣವಿ (12) ಗಂಭೀರವಾಗಿ ಗಾಯಗೊಂಡಿದ್ದಾರೆ.ಕಾರು ಕೂಡ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಗುರುವಾರ ನಡೆದ ಅಪಘಾತದಲ್ಲಿ ಗಂಡ-ಹೆಂಡತಿ ಮತ್ತು ಪುತ್ರಿಯೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಯಮರಾಜನಂತೆ ಎದುರಿನಿಂದ ಬಂದ ಕಾರೊಂದು ನೇರವಾಗಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಲ್ಲದೇ ಡಿಕ್ಕಿ ಹೊಡೆದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಈ ದುರಂತದಿಂದ ಸ್ಕೂಟರ್‌ನಲ್ಲಿದ್ದ ಮಹಿಳೆ ಅನಿತಾ ದಾರುಣವಾಗಿ ಸಾವನ್ನಪ್ಪಿದ್ದಾರೆ.

 

Related Articles

Back to top button
error: Content is protected !!