ರಾಜಕೀಯ

ರಾಹುಲ್ ಗಾಂಧಿ ಸದಸ್ಯತ್ವವನ್ನು ಹೇಗೆ ವಜಾ ಗೊಳಿಸಲಾಗಿತ್ತೋ ಅದೇ ರೀತಿ ಸದಸ್ಯತ್ವವನ್ನು ಮರು ಸ್ಥಾಪಿಸಬೇಕು: ಉಪ ಮುಖ್ಯಮಂತ್ರಿ ಡಿಕೆಶಿ 

Views: 0

ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಎಷ್ಟು ಬೇಗ ಅನರ್ಹವಾಗಿತ್ತೋ ಅಷ್ಟೇ ಬೇಗ ಆದೇಶ ತೆರವಾಗಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಅವರು ರಾಹುಲ್ ಗಾಂಧಿ ಉಪನಾಮ ಪ್ರಕರಣದಲ್ಲಿ ಅವರಿಗೆ ಅಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದರು.

ಅನ್ಯಾಯ ಆದಾಗ ನ್ಯಾಯ ಕೊಡಿಸಲು ನ್ಯಾಯಾಂಗ ಶಕ್ತಿ ಪೀಠ ಇದೆ ಎನ್ನುವುದಕ್ಕೆ ಸುಪ್ರೀಂ ಕೋರ್ಟ್ ಈದಿನ ಇಂದಿನ ತೀರ್ಪೆ ಸಾಕ್ಷಿ. ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ, ದೇಶ ಹಾಗೂ ಜನರ ಹಿತಕ್ಕಾಗಿ ರಾಹುಲ್ ಗಾಂಧಿಯವರು ಎತ್ತಿರುವ ಧ್ವನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವದಾಗಿದೆ.

ನ್ಯಾಯಾಂಗದ ಆದೇಶ ಬಂದ 24 ತಾಸುಗಳಲ್ಲಿ ಅವರ ಸದಸ್ಯತ್ವವನ್ನು ಹೇಗೆ ವಜಾ ಗೊಳಿಸಲಾಗಿತ್ತೋ ಅದೇ ರೀತಿ ಅವರ ಸದಸ್ಯತ್ವವನ್ನು ಮರು ಸ್ಥಾಪಿಸಬೇಕು ಇಲ್ಲದಿದ್ದರೆ ಸ್ಪೀಕರ್ ಅವರು ಸಮಸ್ಯೆಗೆ ಸಿಲುಕುತ್ತಾರೆ ಎಂದು ಹೇಳಿದರು.

ನ್ಯಾಯ ನೀಡುವ ಪೀಠದಿಂದ ಅನ್ಯಾಯವಾಗುವುದಿಲ್ಲ ಎಂಬ ಮಾತನ್ನು ನಾನು ಈ ಹಿಂದೆಯೇ ಹೇಳಿದ್ದೆ, ಈ ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಮಾನ ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣಕ್ಕೆ ಜಾಗವಿಲ್ಲ ಎಂಬ ಸಂದೇಶ ಈ ತೀರ್ಪಿನಿಂದ ಬಂದಿದೆ.

ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದ ನಂತರ ಸದಸ್ಯತ್ವವನ್ನು ಯಾವ ರೀತಿ ಕುತಂತ್ರದ ಮೂಲಕ ಮಾಡಿದ್ದಾರೆ ಎಂದು ಜನ ಹಾಗೂ ಇಡೀ ವಿಶ್ವ ಗಮನಿಸಿದೆ ಎಂದು ಹೇಳಿದರು.

Related Articles

Back to top button
error: Content is protected !!