ಶಿಕ್ಷಣ

ಉಡುಪಿ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಗಾರ

Views: 1

ಉಡುಪಿ: ಸರಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ, ಪದವಿ ಪೂರ್ವಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಉಡುಪಿ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ರಾಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಗಾರವು ದಿನಾಂಕ 02.08.2023 ರಂದು ನೆರವೇರಿತು.

ಉಡುಪಿ ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ರಾಜ್ಯಶಾಸ್ತ್ರ ಉಪನ್ಯಾಸಕರ ಜವಾಬ್ದಾರಿ ಮತ್ತು ಪಾತ್ರಗಳ ಕುರಿತು ತಿಳಿ ಹೇಳಿದರು.

ಸಂಘದ ವತಿಯಿಂದ ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಅರುಣ್ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನ ನೀಡಿ, ಗೌರವಿಸಲಾಯಿತು.

ರಾಜ್ಯಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರಾಜಕೀಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಪ್ರಶಾಂತ್ ನೀಲಾವರ ಅವರು ಭಾರತೀಯ ಮತ್ತು ನೈತಿಕ ಮೌಲ್ಯಗಳು ಎಂಬ ವಿಷಯದ ಬಗ್ಗೆ ವಿಚಾರ ಗೋಷ್ಠಿಯನ್ನು ನಡೆಸಿಕೊಟ್ಟರು.

ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ವಾಸು ಮೋಗೆರಾ ಮತ್ತು ಶ್ರೀ ಎಡ್ವರ್ಡ್ ಡಿಸೋಜ ಅವರ ನೇತೃತ್ವದಲ್ಲಿ 9 ತಂಡಗಳಲ್ಲಿ ಉಪನ್ಯಾಸಕರು ಪ್ರಾಜೆಕ್ಟ್ ಚಟುವಟಿಕೆ ಮತ್ತು ಅಸೈನ್ ಮೆಂಟ್ ತಯಾರಿಸಿದರು.

ಸಂಘದ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು. ಪ್ರಸ್ತುತ ಸಂಘದ ಕಾರ್ಯ ಚಟುವಟಿಕೆಗಳ ಅಂದಾಜು ಆಯ-ವ್ಯಯಗಳ ಲೆಕ್ಕಾಚಾರ ಮಾಡಲಾಯಿತು.

ರವೀಂದ್ರ ಉಪಾಧ್ಯ ಪ್ರಾಂಶುಪಾಲರು ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ, ಅಧ್ಯಕ್ಷರಾಗಿ ಶ್ರೀ ದಯಾನಂದ. ಡಿ ಅಧ್ಯಕ್ಷರು ಪದವಿಪೂರ್ವ ಕಾಲೇಜು ರಾಜಕೀಯ ಶಾಸ್ತ್ರ ಉಪನ್ಯಾಸಕರ ಸಂಘ ಇವರು ಉಪಸ್ಥಿತರಿದ್ದರು. ಶ್ರೀ ಹರೀಶ್ .ಬಿ. ನಾಯಕ್ ವಂದಿಸಿದರು. ಶ್ರೀಮತಿ ಸಂಧ್ಯಾ ಎಂ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಸುಧಾಕರ ವಕ್ವಾಡಿ ಸಂಪಾದಕರು.

(ರಾಜ್ಯ ಶಾಸ್ತ್ರ ಉಪನ್ಯಾಸಕ).                                                     ಕನ್ನಡ ಕರಾವಳಿ

 

Related Articles

Back to top button