ಐಟಿಐ ವ್ಯಾಸಂಗ ಮಾಡುತ್ತಿರುವಾಗಲೇ ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್ ವಾಹನ ತಯಾರಿಸಿದ ವಿದ್ಯಾರ್ಥಿ
Views: 24
ಕನ್ನಡ ಕರಾವಳಿ ಸುದ್ದಿ: ಶ್ರದ್ಧೆ, ಪರಿಶ್ರಮ, ಪ್ರಯತ್ನ, ಹೋರಾಟದಿಂದ ಐಟಿಐನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನದೇ ಆದ ಆಲೋಚನೆ ಹಾಗೂ ತಾಂತ್ರಿಕ ಜ್ಞಾನ ಬಳಸಿ ಸಾಮಾನ್ಯ TVS XL 100 ವಾಹನವನ್ನು ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿ ಗಮನ ಸೆಳೆದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕುರುವಂಗಿ ಮೂಲದ ಸುನೀಲ್ ಐಟಿಐ ವ್ಯಾಸಂಗ ಮಾಡುತ್ತಿರುವಾಗ ಸ್ವಂತ ಏನಾದರೂ ವಿಭಿನ್ನ ಸಾಧನೆ ಮಾಡಬೇಕೆಂಬ ಆಸೆ ಇತ್ತು. ಇದೇ ಕನಸನ್ನು ನನಸಾಗಿಸಲು ಮುಂದಾದ ಆತ ತನ್ನ ಬಳಿ ಇದ್ದ TVS XL 100 ವಾಹನವನ್ನು ಸಂಪೂರ್ಣವಾಗಿ ಬಿಡಿಸಿ, ಅದನ್ನು ಎಲೆಕ್ಟ್ರಿಕ್ ವಾಹನವಾಗಿ ರೂಪಾಂತರಿಸಿದ್ದಾನೆ.
ಸುನೀಲ್ ತಯಾರಿಸಿದ ಈ ವಾಹನ ಕೇವಲ 4 ಗಂಟೆಗಳ ಚಾರ್ಜ್‌ಗೆ ಸುಮಾರು 45 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ. ಈ ವಾಹನ ತಯಾರಿಸಲು ಸುಮಾರು 45 ಸಾವಿರ ರೂಪಾಯಿ ವೆಚ್ಚವಾಗಿದ್ದು, ಕೆಲವು ಅಗತ್ಯ ಉಪಕರಣಗಳನ್ನು ದೆಹಲಿಯಿಂದ ತರಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ವಾಹನ ತಯಾರಿಸಿದ್ದು ಹೇಗೆ? ವಾಹನದಲ್ಲಿ 750 ವೋಲ್ಟ್ ಮೋಟಾರ್, 48 ವೋಲ್ಟ್ 30Ah ಬ್ಯಾಟರಿ ಅಳವಡಿಸಲಾಗಿದ್ದು, 48 ವೋಲ್ಟ್ 10 ಆರ್ಮ್ಸ್ ಕಂಟ್ರೋಲರ್ ಜೊತೆಗೆ 1000 ವಾಟ್ ಬ್ಯಾಟರಿ ವ್ಯವಸ್ಥೆ ಬಳಸಲಾಗಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವಂತೆ ವಾಹನವನ್ನು ವಿನ್ಯಾಸಗೊಳಿಸಿರುವುದು ವಿಶೇಷವಾಗಿದೆ.
ಈ ಗಾಡಿಯನ್ನು ಈ ರೀತಿಯಾಗಿ ತಯಾರಿಸಲು ನಾನು ಸುಮಾರು ಮೂರು ತಿಂಗಳುಗಳ ಕಾಲ ತೆಗೆದುಕೊಂಡಿದ್ದೇನೆ. ಇದಕ್ಕೆ ಸಹಾಯ ಮಾಡಿದವರು ನನ್ನ ಗುರುಗಳು. ನಾನು ಹೊರಗೆ ವರ್ಕ್ ಶಾಪ್ಗೆ ಕಲಿಯಲು ಹೋದಂತಹ ಸಂದರ್ಭದಲ್ಲಿ ಈ ರೀತಿಯ ಆಲೋಚನೆ ಬಂತು’ ಎಂದಿದ್ದಾನೆ ಯುವಕ
ಇದು ಟಿವಿಎಸ್ ಎಕ್ಸೆಲ್ ಗಾಡಿ. ನಾರ್ಮಲ್ ಆಗಿ ಪೆಟ್ರೋಲ್ನಲ್ಲಿಯೇ ಈ ಗಾಡಿ ಸಂಚಾರ ಮಾಡುತ್ತದೆ. ಅದನ್ನು ಈಗ ಇವಿ ಬೈಕ್ ಆಗಿ ಕನ್ವರ್ಟ್ ಮಾಡಲಾಗಿದ್ದು, ಇದನ್ನು ಕನ್ವರ್ಟ್ ಮಾಡಲು ಬ್ಯಾಟರಿ ಮೋಟಾರ್ ಹಾಗೂ ಕಂಟ್ರೋಲರ್ ಬಳಸಲಾಗಿದೆ. ಈ ರೀತಿ ಮಾಡಲು ನನಗೆ 40 ರಿಂದ 45 ಸಾವಿರ ರೂಪಾಯಿವರೆಗೂ ಖರ್ಚಾಗಿದೆ. ಈ ಬೈಕ್ ವಾಯುಮಾಲಿನ್ಯವನ್ನು ತಡೆಗಟ್ಟಲಿದೆ’ ಎಂದು ಹೇಳಿದರು
‘ಮನೆಯಲ್ಲಿ ನಾಲ್ಕು ಗಂಟೆಗಳ ಕಾಲ ಇದನ್ನು ಚಾರ್ಜ್ ಮಾಡಿದರೆ, ಸುಮಾರು 45 ರಿಂದ 50 ಕಿಲೋಮೀಟರ್ವರೆಗೂ ಇದು ಮೈಲೇಜ್ ನೀಡುತ್ತದೆ.
‘ಕಾಲೇಜಿಗೂ ಕೂಡ ಇದೇ ಗಾಡಿಯಲ್ಲಿ ಹೋಗುತ್ತೇನೆ. ಇದಕ್ಕೆ ನನ್ನ ಕಾಲೇಜಿನ ಸ್ನೇಹಿತರು ಹಾಗೂ ಉಪನ್ಯಾಸಕರು ಹೆಚ್ಚಿನ ಬೆಂಬಲ ನೀಡುತ್ತಿದ್ದು, ನಿನ್ನ ಯೋಚನೆ ಇಷ್ಟಕ್ಕೆ ನಿಲ್ಲಿಸಬೇಡ, ಮುಂದೆ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡು, ನಾವು ನಿನಗೆ ಪ್ರೋತ್ಸಾಹವನ್ನು ನೀಡುತ್ತೇವೆ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಇವಿ ಬೈಕನ್ನು ತಯಾರಿಸಲು ಬೇಕಾದಂತಹ ವಸ್ತುಗಳನ್ನು ನಮ್ಮ ಸರ್ ದೆಹಲಿಯಿಂದ ಆರ್ಡರ್ ಮಾಡಿ ಆನ್ಲೈನ್ನಲ್ಲಿ ತರಿಸಿ ಕೊಟ್ಟಿದ್ದಾರೆ’ ಎಂದು ಸುನೀಲ್ ವಿವರಿಸಿದರು.






