ಕೋಟೇಶ್ವರ: ಚಿರಂತನ ಶಿಕ್ಷಣ ಸಂಸ್ಥೆ ಉದ್ಘಾಟನೆ
Views: 57
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ಯುವ ಮೆರಿಡಿಯನ್ ಸಮೀಪ ಲೋಟಸ್ ಎಡ್ಜ್ ಸಂಕೀರ್ಣದಲ್ಲಿ ಸುಲೋಚನಾ ಸರ್ವೋತ್ತಮ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಚಿರಂತನ ಶಿಕ್ಷಣ ಸಂಸ್ಥೆ ಗುರುವಾರ ಲೋಕಾರ್ಪಣೆಗೊಂಡಿದೆ.
ಬೈಂದೂರಿನ ಮಾಜಿ ಶಾಸಕ, ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಚಿರಂತನ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸಿ, ಮಾತನಾಡಿ ಸಮಾಜದ ಕಟ್ಟ ಕಡೆಯ ಮಗು ವಿದ್ಯಾವಂತನಾದರೆ ಸಮಾಜದ ಸುಧಾರಣೆ ಆಗುತ್ತದೆ. ಆ ನಿಟ್ಟಿನಲ್ಲಿ ಆರಂಭಗೊಂಡಿರುವ ಈ ಚಿರಂತನ ಶಿಕ್ಷಣ ಸಂಸ್ಥೆಯು ಈ ಭಾಗದ ಮಕ್ಕಳಿಗೆ ಅನುಕೂಲವಾಗಲಿ, ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಛಲ, ಶಿಕ್ಷಣದ ಉದ್ದೇಶ ಸಾರ್ಥಕತೆಗೊಂಡು ಯಶಸ್ವಿಯಾಗಿ ಮುನ್ನಡೆಯಲಿ ಎಂದರು.
ಡಾ| ಚಿಂತನ ರಾಜೇಶ್ ಅವರು ಮಕ್ಕಳ ಮನೋ ವಿಜ್ಞಾನ ವಿಷಯದಲ್ಲಿ ಬಹಳಷ್ಟು ಅಧ್ಯಯನ ಮಾಡಿದ್ದು, ಮಾತ್ರವಲ್ಲದೆ ಶಿಕ್ಷಣ ರಂಗದ ಬಗ್ಗೆ ತನ್ನದೇ ಆದ ದೂರದೃಷ್ಟಿ ಹೊಂದಿದ್ದಾರೆ. ಹಾಗಾಗಿ ಈ ‘ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುವ ವಿಶ್ವಾಸವಿದೆ ಎಂದವರು ಹಾರೈಸಿದರು.
ಕುಂದಾಪುರದ ಮನೋ ವೈದ್ಯ ಡಾ। ಪ್ರಕಾಶ್ ಸಿ. ತೋಳಾರ್ ಮಾತನಾಡಿ, ಇವತ್ತಿನ ಶಿಕ್ಷಣ ಮಟ್ಟದಲ್ಲಿ ಯಾವ ರೀತಿ ಇರಬೇಕು.ಯಾವ ರೀತಿ ಬದಲಾವಣೆಯಾಗಬೇಕು ಎನ್ನುವ ದೂರದಷ್ಟಿ, ಚಿಂತನೆ ಅವರಲ್ಲಿದೆ. ಮಕ್ಕಳ ಆಸಕ್ತಿ ಕೇಳಿ ಅವರಿಗೆ ತರಬೇತಿ ಕೊಡಬೇಕೇ ಹೊರತು ಹೆತ್ತವರ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು. ಮಕ್ಕಳ ಬಗ್ಗೆ ಹೆತ್ತವರಿಗೆ. ಅತಿಯಾದ ಆತಂಕ ಬೇಡ ಎಂದರು.
ವೇದಿಕೆಯಲ್ಲಿ ಗುತ್ತಿಗೆದಾರ ಕಮಲ್ ಕಿಶೋರ್ ಹೆಗ್ಡೆ ಚಿರಂತನ ಶಿಕ್ಷಣ ಸಂಸ್ಥೆ ಸಂಚಾಲಕಿ ಸುಲೋಚನಾ ಸರ್ವೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ಚಿರಂತನ ಶಿಕ್ಷಣ ಸಂಸ್ಥೆ ಮುಖ್ಯಸ್ಥೆಡಾ। ಚಿಂತನಾ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,ಉತ್ತಮ ಗುಣಮಟ್ಟದ ತರಬೇತಿ ನೀಡಿ ಅತಿ ಹೆಚ್ಚಿನ ಕೌಶಲ್ಯದ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಕಳುಹಿಸಬೇಕೆಂಬ ಪ್ರಯತ್ನ ನಮ್ಮದು. ಇಂದಿನ ಅವಶ್ಯಕತೆಗೆ ಅನುಗುಣವಾಗಿ ಮಕ್ಕಳ ಹಾಗೂ ಹದಿಹರೆಯದವರಿಗಾಗಿ ವಿಶೇಷ ಆಪ್ತ ಸಮಾಲೋಚನೆ ಹಾಗೂ ವೃತ್ತಿಪರ ಮಾರ್ಗದರ್ಶನ ಕೇಂದ್ರವಾಗಿ ಈ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದರು.
ಚಿರಾ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ವಿನುತಾ ಶೆಟ್ಟಿ ವಂದಿಸಿದರು.










