ಶಿಕ್ಷಣ

ಯೋಗಾಸನ ಸ್ಪರ್ಧೆಯಲ್ಲಿ ವಿದ್ಯಾರಣ್ಯ ಶಾಲೆಯ ಲಾಸ್ಯ ಮಧ್ಯಸ್ಥ ಜಿಲ್ಲಾ ಮಟ್ಟಕ್ಕೆ ಆಯ್ಕೆ  

Views: 11

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೋಣಿಯ ಸರಕಾರಿ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ವಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಲಾಸ್ಯ ಮಧ್ಯಸ್ಥ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಲಾಸ್ಯ ಮಧ್ಯಸ್ಥ 17ರ ವಯೋಮಾನದ ಬಾಲಕಿಯರ ವಿಭಾಗದ ಟ್ರೆಡಿಷನಲ್‌ ಹಾಗೂ ಆರ್ಟಿಸ್ಟಿಕ್‌ (ಸಿಂಗಲ್‌ )ಯೋಗಾಸನ ಸ್ಪರ್ಧೆಗಳೆರಡರಲ್ಲೂ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಈಕೆ ಅರುಣ ಮಧ್ಯಸ್ಥ ಹಾಗೂ ಲತಾ ಮಧ್ಯಸ್ಥ ದಂಪತಿಯ ಪುತ್ರಿ.

ಅಂತೆಯೇ, 14ರ ವಯೋಮಾನದೊಳಗಿನ ಬಾಲಕರ ವಿಭಾಗದ ಟ್ರೆಡಿಷನಲ್‌ ಯೋಗಾಸನ ಸ್ಪರ್ಧೆಯಲ್ಲಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ವಿಲಾಸ್‌ ಡಿ. ದ್ವಿತೀಯ ಸ್ಥಾನ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಶಾಂತ್‌ ಮಡಿವಾಳ್‌, ಚಂದ್ರಶೇಖರ ಮಾರ್ಗದರ್ಶನ ನೀಡಿದ್ದರು.ತಂಡ ವ್ಯವಸ್ಥಾಪಕರಾಗಿ ಶಿಕ್ಷಕಿಯರಾದ ಸಾನಿಕಾ ಹೆಚ್‌ ವಿ, ಕಾವ್ಯಾ ಶೆಟ್ಟಿ ನಿರ್ವಹಿಸಿದ್ದರು. ಸೂಕ್ತ ಸಾಧನೆಗೈದ ವಿದ್ಯಾರ್ಥಿಗಳನ್ನು ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ಅಧ್ಯಕ್ಷರಾದ ಡಾ.ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್‌ ಶೆಟ್ಟಿ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್‌ ಅವರು ಅಭಿನಂದಿಸಿದ್ದಾರೆ.

Related Articles

Back to top button
error: Content is protected !!