ರಾಜಕೀಯ

ರಾಜ್ಯ ಬಿಜೆಪಿ ಘಟಕದ ಪುನಾರಚನೆಗೆ ವರಿಷ್ಠರ ನಿರ್ಧಾರಕ್ಕೆ ವೇದಿಕೆ ಸಿದ್ಧ

Views: 0

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಘಟಕವನ್ನು ಪುನಾರಚಿಸಿದ ಬೆನ್ನಲ್ಲೇ ರಾಜ್ಯ ಘಟಕದ ಪುನಾರಚನೆಗೆ ಸಿದ್ಧತೆಯಲ್ಲಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈ ಬಿಟ್ಟು ಮಾಜಿ ಸಚಿವ ಸಿಟಿ. ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಈ ಮಧ್ಯೆ ಸೋಮವಾರ ದೆಹಲಿಗೆ ತೆರಳುವುದಾಗಿ ಸಿಟಿ. ರವಿ ಅವರೇ ಹೇಳಿದ್ದಾರೆ. ಈ ಮಾತಿಗೆ ಹೆಚ್ಚು ಬೆಲೆ ಬಂದಿತ್ತು.ಆದರೆ ದೆಹಲಿಗೆ ತೆರಳದೆ ಇರುವುದರಿಂದ ರಾಜ್ಯಾಧ್ಯಕ್ಷರ ಹುದ್ದೆ ಕುರಿತಂತೆ ಕುತೂಹಲ ಹೆಚ್ಚಾಗಿದೆ.

ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು ಸೇರಿದಂತೆ ಪದಾಧಿಕಾರಿಗಳ ಆಯ್ಕೆಯನ್ನು ಜಾತಿ ಲೆಕ್ಕಾಚಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ.

ಸಿಟಿ ರವಿ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದರೆ ವಿಧಾನ ಸಭೆಯ ಪ್ರತಿಪಕ್ಷ ಸ್ಥಾನಕ್ಕೆ ಲಿಂಗಾಯಿತರು. ವಿಧಾನ ಪರಿಷತ್ ಸ್ಥಾನಕ್ಕೆ ಹಿಂದುಳಿದ ವರ್ಗದವರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಿ ವೈ ವಿಜಯೇಂದ್ರ, ಮಹೇಶ್ ಟೆಂಗಿನಕಾಯಿ ಅವರನ್ನು ನೇಮಿಸಲಾಗುವುದು. ಉಪಾಧ್ಯಕ್ಷರ ಹುದ್ದೆಯಲ್ಲಿ ಹಿಂದುಳಿದ ವರ್ಗದವರಿಗೆ ಮತ್ತು ಇತರ ಸಮುದಾಯಕ್ಕೆ ಆದ್ಯತೆ ನೀಡಲಾಗುವುದು ಎಂಬ ಮಾತು ಕೇಳಿ ಬಂದಿದೆ.

ರಾಜ್ಯ ನಾಯಕರಲ್ಲಿ ಇನ್ನೂ ಒಮ್ಮತ ಬಂದಿಲ್ಲ ಹೀಗಾಗಿ ಸಿಟಿ ರವಿ ದೆಹಲಿ ಭೇಟಿ ಮುಂದೂಡಿದ್ದಾರೆ. ಈ ವಾರದಲ್ಲಿ ರಾಜ್ಯಾಧ್ಯಕ್ಷರು ಸೇರಿದಂತೆ ಇತರ ಹುದ್ದೆಗಳ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

Related Articles

Back to top button
error: Content is protected !!