ಸಾಮಾಜಿಕ

ಮದುವೆ ಮಂಟಪದಲ್ಲಿ ಮಾಲೆ ಹಾಕುವಾಗ ದಿಡೀರ್ ಹೈಡ್ರಾಮಾ!!..ವರನಿಗೆ ಶಾಕ್ ಕೊಟ್ಟ ವಧು!

Views: 77

ಕನ್ನಡ ಕರಾವಳಿ ಸುದ್ದಿ: ವಾರಣಾಸಿಯ ಲೋಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ತೌನಿ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದು ನಾಟಕೀಯ ತಿರುವು ಪಡೆದುಕೊಂಡಿತು. ಪಾರಸ್ ರಾಜ್‌ಭರ್ ಎಂಬುವವರ ಪುತ್ರಿ ಕಿರಣ್ ರಾಜ್‌ಭರ್ ಅವರ ಮದುವೆಯ ಮೆರವಣಿಗೆ ಮುಗಿದು, ಮಾಲೆ ಬದಲಾಯಿಸುವ ಶಾಸ್ತ್ರಕ್ಕಾಗಿ ವಧು-ವರರು ವೇದಿಕೆಯ ಮೇಲೆ ನಿಂತಿದ್ದಾಗ, ಇಡೀ ಸಭೆಯೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆಯಿತು.

ಮಾಲೆ ಬದಲಾಯಿಸುವ ಶಾಸ್ತ್ರದ ಸಮಯದಲ್ಲಿ ಕಿರಣ್, ದಿಢೀರನೆ ವರನಿಗೆ ಹಾರ ಹಾಕಲು ನಿರಾಕರಿಸಿದರು. ಅಲ್ಲದೆ, ವೇದಿಕೆಯಿಂದ ಕೆಳಗಿಳಿದು ಜನಸಮೂಹದಲ್ಲಿದ್ದ ತನ್ನ ಪ್ರಿಯತಮ ಪವನ್ ಎಂಬ ಯುವಕನ ಬಳಿಗೆ ತೆರಳಿದಳು. ಇದನ್ನು ನೋಡಿ ಮದುವೆ ಮಂಟಪದಲ್ಲಿದ್ದ ಜನರು ಒಂದು ಕ್ಷಣ ದಂಗಾದರು.

ಚೋಲಾಪುರ ಪ್ರದೇಶದ ಭರ್ತೌಲಿ ಗ್ರಾಮದ ನಿವಾಸಿಯಾದ ಪವನ್ ಮತ್ತು ಕಿರಣ್ ತುಂಬಾ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕುಟುಂಬದವರು ಕಿರಣ್ ಮದುವೆಯನ್ನು ಬೇರೆಡೆ ನಿಶ್ಚಯಿಸಿದ್ದರು. ಪಾಲಕರ ಒತ್ತಾಯದ ಮೇರೆಗೆ ಕಿರಣ್ ಕೂಡ ಮದುವೆಗೆ ಒಪ್ಪಿಕೊಂಡಿದ್ದ. ಆದರೆ, ತನ್ನ ಮದುವೆಗೆ ಬಂದಿದ್ದ ಪ್ರಿಯತಮನನ್ನು ನೋಡುತ್ತಿದ್ದಂತೆ ಕಿರಣ್ ತನ್ನ ನಿರ್ಧಾರವನ್ನು ಬದಲಿಸಿ, ತಾನು ಪವನ್ನನ್ನು ಪ್ರೀತಿ ಮಾಡುತ್ತಿರುವುದಾಗಿ ಮತ್ತು ಆತನನ್ನೇ ಮದುವೆ ಆಗುವುದಾಗಿ ಹೇಳಿದಳು.

ಈ ಬೆಳವಣಿಗೆಯಿಂದ ಕೋಪಗೊಂಡ ಕೆಲವರು ಪವನ್ ಮೇಲೆ ಹಲ್ಲೆ ನಡೆಸಲು ಮುಂದಾದರು. ಕೂಡಲೇ ತನ್ನ ಪ್ರಿಯತಮನ ಪರವಾಗಿ ನಿಂತ ಕಿರಣ್, ಆತನನ್ನು ಹೊಡೆಯದಂತೆ ವಿನಂತಿಸಿಕೊಂಡರಲ್ಲದೆ, ತಾನು ಆತನನ್ನೇ ಮದುವೆಯಾಗುವುದಾಗಿ ಎಲ್ಲರೆದುರು ಘೋಷಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡ ವರ ಮತ್ತು ಆತನ ಕುಟುಂಬದವರು ಶಾಂತವಾಗಿಯೇ ಅಲ್ಲಿಂದ ನಿರ್ಗಮಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕುಟುಂಬಗಳ ನಡುವೆ ಸಂಧಾನಕ್ಕೆ ಪ್ರಯತ್ನಿಸಿದರು.

ಪೊಲೀಸ್ ಠಾಣೆಯಲ್ಲಿ ಗಂಟೆಗಳ ಕಾಲ ನಡೆದ ಚರ್ಚೆಯ ನಂತರವೂ ಕಿರಣ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಗ್ರಾಮಸ್ಥರು ಮತ್ತು ಪೊಲೀಸರ ಸಮ್ಮುಖದಲ್ಲಿ ಎರಡೂ ಕುಟುಂಬದವರು ಮದುವೆಗೆ ಒಪ್ಪಿಗೆ ನೀಡಿದರು. ಕಿರಣ್ ಮತ್ತು ಪವನ್ ಅವರ ವಿವಾಹವು ಹತ್ತಿರದ ದೇವಸ್ಥಾನವೊಂದರಲ್ಲಿ ನೆರವೇರಿತು. ಕುಟುಂಬದ ಹಿರಿಯರು ನವಜೋಡಿಗೆ ಹರಸಿದರು. ಅಂತಿಮವಾಗಿ, ವಧುವಿಲ್ಲದೆಯೇ ವರನ ಮೆರವಣಿಗೆ ಮರಳಿ ಹೋದರೆ, ಪ್ರಿಯತಮನೊಂದಿಗೆ ಕಿರಣ್ ಹೊಸ ಜೀವನ ಆರಂಭಿಸಿದರು

Related Articles

Back to top button
error: Content is protected !!