ಇತರೆ

ಹುಟ್ಟುಹಬ್ಬದ ಸಂಭ್ರಮ ಸಡಗರಕ್ಕೆ ಹೋದ ಅಳಿಯನಿಗೆ ಪತ್ನಿ, ಮಾವನಿಂದ ಸ್ಕೆಚ್! 

Views: 52

ಕನ್ನಡ ಕರಾವಳಿ ಸುದ್ದಿ: ಹುಟ್ಟುಹಬ್ಬದ ಸಂಭ್ರಮ ಸಡಗರಕ್ಕೆ ಅತ್ತೆ ಮನೆಯವರು ಅಳಿಯನನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದರು. ಆದರೆ ಆ ಸಂಭ್ರಮದ ಹಿಂದೆ ಒಂದು ಸಂಚು ಅಡಗಿತ್ತು. ಹುಟ್ಟುಹಬ್ಬ ಆಚರಿಸಲು ಹೋದ ಅಳಿಯನಿಗೆ ಪತ್ನಿ ಮತ್ತು ಮಾವನೇ ಸೇರಿ ವಿಷವಿಕ್ಕಿ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದಿದೆ.

ಮೃತ ಯುವಕನನ್ನು ಶಿವಂ ಎಂದು ಗುರುತಿಸತಲಾಗಿದೆ. ಆತನ ಪತ್ನಿಯ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಶಿವಂ ತನ್ನ ಅತ್ತೆ ಮನೆಗೆ ಹೋಗಿದ್ದ. ಎಲ್ಲರೂ ನಗುತ್ತಾ ಸಂಭ್ರಮಿಸುತ್ತಿರುವಾಗಲೇ ಶಿವಂಗೆ ಕುಡಿಯಲು ಪಾನೀಯ ನೀಡಲಾಗಿತ್ತು. ಆ ಪಾನೀಯದಲ್ಲಿ ಮೊದಲೇ ಪ್ರಾಣಾಪಾಯಕಾರಿ ವಿಷವನ್ನು ಬೆರೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಶಿವಂ ಮತ್ತು ಆತನ ಪತ್ನಿಯ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಪತ್ನಿ ತನ್ನ ತಂದೆಯ ಮನೆಯಲ್ಲೇ ನೆಲೆಸಿದ್ದಳು. ಈ ವಿವಾದವನ್ನು ಕೊನೆಗಾಣಿಸಲು ಮತ್ತು ಅಳಿಯನಿಂದ ಮುಕ್ತಿ ಪಡೆಯಲು ಪತ್ನಿ ಪೂಜಾ ಮತ್ತು ಮಾವ ರಾಕೇಶ್ ಸೇರಿ ಈ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.

ಸದ್ಯ ಪೊಲೀಸರು ಹಂತಕ ಪತ್ನಿ ಮತ್ತು ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಅಳಿಯನನ್ನು ಕರೆಸಿಕೊಂಡು ಪೂರ್ವ ನಿಯೋಜಿತ ಸಂಚಿನಂತೆ ವಿಷ ನೀಡಲಾಗಿದೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Related Articles

Back to top button
error: Content is protected !!