ರಾಜಕೀಯ
7 ಸಂಸದರು ಬಿಜೆಪಿಗೆ ಜಂಪ್.. ಆಪ್ ವಿರುದ್ಧ ಅಣ್ಣಾ ಹಜಾರೆ ಹೇಳಿದ್ದೇನೆ?
Views: 72
ಕನ್ನಡ ಕರಾವಳಿ ಸುದ್ದಿ: ಆಮ್ ಆದ್ಮಿ ಪಕ್ಷದಿಂದ ಹಲವು ನಾಯಕರು ಹೊರಬಂದಿರುವ ಬೆಳವಣಿಗೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಕಾರ್ಯವೈಖರಿಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದರೆ ನಾಯಕರು ಅದನ್ನು ತೊರೆಯುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಘವ್ ಚಡ್ಡಾ ಸೇರಿದಂತೆ ಹಲವು ನಾಯಕರು ಪಕ್ಷದಿಂದ ದೂರವಾಗಿರುವ ಹಿಂದೆ ಆಂತರಿಕ ಭಿನ್ನಾಭಿಪ್ರಾಯಗಳು ಅಥವಾ ಒತ್ತಡದ ವಾತಾವರಣ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದೊಳಗಿನ ವಾತಾವರಣ ಸದಸ್ಯರಿಗೆ ಉಸಿರುಗಟ್ಟಿಸುವಂತಿದ್ದರೆ ಇಂತಹ ನಿರ್ಧಾರಗಳು ಸಹಜ ಎಂದೂ ಹಜಾರೆ ಹೇಳಿದರು. ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಆರಂಭವಾದ ರಾಜಕೀಯ ಪಯಣ ಈಗ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಪ್ರಶ್ನೆಯೂ ಈ ಬೆಳವಣಿಗೆಯಿಂದ ಮತ್ತೆ ಚರ್ಚೆಗೆ ಬಂದಿದೆ.






