ಇತರೆ
ಪತ್ನಿ, ತಾಯಿಯನ್ನು ಕತ್ತು ಹಿಸುಕಿ ಕೊಂದು ಮಕ್ಕಳೊಂದಿಗೆ ರೈಲಿನಡಿಗೆ ಬಿದ್ದು ಆತ್ಮಹತ್ಯೆ!
Views: 67
ಕನ್ನಡ ಕರಾವಳಿ ಸುದ್ದಿ: ಮೋಹನ್ ಎಂಬಾತ ತನ್ನ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುಪತಿಯಲ್ಲಿ ನಡೆದಿದೆ. ಸ್ಥಳೀಯ ಸುದ್ದಿಪತ್ರಿಕೆ ಚಂದಾದಾರಿಕೆ
ಮೋಹನ್ ತನ್ನ ಪತ್ನಿ ಹರಿತಾ(33) ಹಾಗೂ ತಾಯಿ ಚಂದ್ರಕಲಾ(65) ಅವರನ್ನು ಮನೆಯಲ್ಲೇ ಕೊಂದಿದ್ದಾನೆ. ಬಳಿಕ ಶಾಲೆಯಲ್ಲಿದ್ದ ಮಗ ಕೌಶಿಕ್(14) ಮತ್ತು ಮಗಳು ಹರಿಣಿ(12) ಅವರನ್ನು ಸುಳ್ಳು ಹೇಳಿ ಶಾಲೆಯಿಂದ ಕರೆದುಕೊಂಡು ಬಂದು ಸಂಜೆಯವರೆಗೂ ಸುತ್ತಾಡಿ, ರೈಲು ಹಳಿಗಳ ಮೇಲೆ ಮಲಗಿದ್ದಾನೆ.
ಆರೋಪಿ ಈ ಕೃತ್ಯ ಏಕೆ ಎಸಗಿದ್ದಾನೆಂದು ತಿಳಿದುಬಂದಿಲ್ಲ. ಮೋಹನ್ ಪತ್ನಿಯ ಸಹೋದರ ಬಾಲಕೃಷ್ಣ ಎಂಬವರು ಮನೆಗೆ ಹೋದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ






