ಧಾರ್ಮಿಕ

ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ‘ಪ್ರತಿಷ್ಠಾ ವರ್ಧಂತಿ’ ಧಾರ್ಮಿಕ ಸಭಾ ಕಾರ್ಯಕ್ರಮ 

Views: 221

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಏಪ್ರಿಲ್ 21ರಂದು ನಡೆಯಿತು. 

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿದ ಮಾಜಿ ಶಾಸಕರು ಮತ್ತು ಸಂಸದರು ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ದೇವಾಲಯವು ಕೇವಲ ಪೂಜಾ ಸ್ಥಳವಾಗಿರದೇ ಭಾರತೀಯ ಸಂಸ್ಕೃತಿಯ ಜೀವಂತ ಸಂಕೇತವಾಗಿದೆ. ಧಾರ್ಮಿಕತೆ, ಅಧ್ಯಾತ್ಮಿಕತೆ, ಸೌಹಾರ್ದತೆ ಮತ್ತು ಸೇವೆಯ ಚಿಂತನೆಗಳು ದೇವಾಲಯದ ಮೂಲಕ ಜನಮನದಲ್ಲಿ ನೆಲೆಯಾಗಿದೆ. ಊರಿನ ಸಹಕಾರದೊಂದಿಗೆ ನಡೆಯಲಿರುವ ‘ಉತ್ಸವ’ ನಮ್ಮ ನಿಲುವು ಮತ್ತು ವ್ಯಕ್ತಿತ್ವ ರೂಪಿಸುತ್ತದೆ. ಆ ನಿಟ್ಟಿನಲ್ಲಿ ದೇವರ ಆಶೀರ್ವಾದದೊಂದಿಗೆ ವ್ಯಕ್ತಿ ಮತ್ತು ವ್ಯಕ್ತಿತ್ವ ಜೀವನದಲ್ಲಿ ಬದಲಾವಣೆಯಾದಾಗ ಊರಿನ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಶಾಸ್ತ್ರೋತ್ತವಾಗಿ ನಡೆದು, ಭಕ್ತರು ಪುಣ್ಯ ಕಾಲದಲ್ಲಿ ಭಾಗವಹಿಸಿದಾಗ ದೇವಸ್ಥಾನದ ಕಲೆ ಅಭಿವೃದ್ಧಿಯಾಗಿ ಭಕ್ತರ ಅಭೀಷ್ಠೆ ನೆರವೇರುತ್ತದೆ ಎಂದರು. 

ಉಡುಪಿ ಜಿಲ್ಲಾ ಹಿಂದೂ ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ್ ಅಡಿಗ ಧಾರ್ಮಿಕ ಉಪನ್ಯಾಸ ನೀಡುತ್ತಾ ಮಾತನಾಡಿ, ದೇವಸ್ಥಾನ ಮತ್ತು ಶಾಲೆ ಊರಿನ ಎರಡು ಕಣ್ಣುಗಳಿದ್ದಂತೆ ನಮ್ಮ ಮನಸ್ಸಿನ ಏಕಾಗ್ರತೆಗಾಗಿ ದೇವರಿಗೆ ಸೇವೆ ಕೊಟ್ಟಾಗ ಸಕರಾತ್ಮಕ ಭಾವನೆಯಿಂದ ಭಕ್ತರಿಗೆ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.

ದೇಗುಲದ ಶ್ರದ್ಧಾ ಕೇಂದ್ರದಲ್ಲಿ ಭಜನೆ,ನಾಟ್ಯ, ಸಂಗೀತ ಇನ್ನಿತರ ಸತ್ ಕಾರ್ಯದಲ್ಲಿ ಮಕ್ಕಳು ಸಹ ಸಕ್ರಿಯವಾಗಿ ಪಾಲ್ಗೊಂಡಾಗ ವ್ಯಸನ ಮುಕ್ತರಾಗಿ ಪ್ರಜ್ವಲಿಸುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಧನ ಸಹಾಯ ನೀಡಲಾಯಿತು.

ವೇದಿಕೆಯಲ್ಲಿ ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಮ್ ದಿನೇಶ್ ಹೆಗ್ಡೆ ಮೊಳಹಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ, ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ದೇವಸ್ಥಾನದ ದೇವಸ್ಥಾನ ಸಮಿತಿಯ ಅರ್ಚಕ ಕೃಷ್ಣ ಐತಾಳ್, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಪ್ರದೀಪ್ ಪೂಜಾರಿ, ದೇವೇಂದ್ರ ಆಚಾರ್ಯ, ಶ್ರೀಮತಿ ಜಯಂತಿ ಕುಲಾಲ್, ಶ್ರೀಮತಿ ಮಮತಾ ಶೆಟ್ಟಿ, ದಿನೇಶ್ ಕುಮಾರ್ ಉಪಸ್ಥಿತರಿದ್ದರು. 

ದೇವಸ್ಥಾನದ ದೇವಸ್ಥಾನ ಸಮಿತಿಯ ಅಧ್ಯಕ್ಷ ಸತ್ಯರಂಜನ್ ಹೆಗ್ಡೆ ಸ್ವಾಗತಿಸಿದರು.ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸೃಜನ್ ವಂದಿಸಿದರು.

 

Related Articles

Back to top button
error: Content is protected !!