ಯುವಜನ

ಕುಂದಾಪುರ: ಪರೀಕ್ಷೆ ತಯಾರಿಯಲ್ಲಿದ್ದ ಪ್ರೌಢಶಾಲಾ ವಿದ್ಯಾರ್ಥಿ ಆತ್ಮಹತ್ಯೆ

Views: 256

ಕುಂದಾಪುರ: ಪ್ರೌಢ ಶಾಲಾ 9 ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ನಗರದ ಮಂಗಲಪಾಂಡೆ ರಸ್ತೆಯ ಮನೆಯೊಂದರಲ್ಲಿ ಗುರುವಾರ ನಡೆದಿದೆ.

ಪುರಸಭೆ ವ್ಯಾಪ್ತಿಯ ಮಂಗಲಪಾಂಡೆ ರಸ್ತೆ ನಿವಾಸಿ ಚಂದ್ರಶೇಖರ ಬಾಯರಿ ಅವರ ಪುತ್ರ ಕೌಶಿಕ್ ಬಾಯರಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಈತ ಕುಂದಾಪುರ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿದ್ದು, ಇನ್ನು ಎರಡು ಪರೀಕ್ಷೆ ಬಾಕಿಯಿದ್ದು, ಎ. 4 ಹಾಗೂ ಎ. 6ರಂದು ನಿಗದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

 

 

 

Related Articles

Back to top button
error: Content is protected !!