ಮನೆಯಲ್ಲಿ ಮದುವೆಗೆ ಒಪ್ಪಿಲ್ಲ ಎಂಬ ಕಾರಣಕ್ಕೆ ಹಬ್ಬಕ್ಕೆ ಬಂದ ಪ್ರೇಮಿಗಳು ನೇಣಿಗೆ ಶರಣು
Views: 78
ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಮದುವೆಗೆ ಒಪ್ಪಿಲ್ಲ ಎಂಬ ಕಾರಣಕ್ಕೆ ಮನನೊಂದ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾದಿಯಾ (19) ಹಾಗೂ ನಾಗೇಂದ್ರ (21) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.
ಪೊನ್ನಾಚಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಹಬ್ಬ ನಡೆಯುತ್ತಿತ್ತು. ಈ ಹಬ್ಬಕ್ಕೆ ನಾಗೇಂದ್ರನ ತಾತ ಶಿವಮಾದಯ್ಯ ಅವರ ಮನೆಗೆ ನಾಗೇಂದ್ರ, ನದಿಯಾ ಕಳೆದ ಮೂರು ದಿನಗಳ ಹಿಂದೆ ಆಗಮಿಸಿ ಉಳಿದುಕೊಂಡಿದ್ದರು. ಈ ನಡುವೆ ನದಿಯಾ ತಂದೆ ಮಹಾದೇವ್ ಮಲೆ ಮಹದೇಶ್ವರ ಬೆಟ್ಟದ ಠಾಣೆಗೆ ಮಗಳು ಕಾಣೆಯಾಗಿದ್ದಾಳೆಂದು ದೂರು ಕೂಡ ಕೊಟ್ಟಿದ್ದರು. ನಿನ್ನೆ ತಡರಾತ್ರಿ ನದಿಯಾ ಮತ್ತು ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾಲಾರ್ ಗ್ರಾಮದ ನಾದಿಯಾಳನ್ನು ನಾಗೇಂದ್ರ ಪ್ರೀತಿಸುತ್ತಿದ್ದ. ಇಬ್ಬರ ಮದುವೆಗೆ ಪೋಷಕರು ಒಪ್ಪಿರಲಿಲ್ಲ. ಮೂರು ದಿನಗಳ ಹಿಂದೆ ನಾಗೇಂದ್ರ ನಾದಿಯಾಳನ್ನು ತನ್ನ ತಾತನ ಮನೆಯಾದ ಪೊನ್ನಾಚಿ ಗ್ರಾಮಕ್ಕೆ ಕರೆತಂದಿದ್ದ. ಅತ್ತ ನಾದಿಯಾ ತಂದೆ ಮಹದೇವ ನಾಪತ್ತೆ ದೂರು ದಾಖಲಿಸಿದ್ದರು.
ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಇತ್ತ ತಾತನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾದಿಯಾ ಹಾಗೂ ನಾಗೇಂದ್ರ ನೇಣಿಗೆ ಕೊರಳೊಡ್ಡಿದ್ದಾರೆ. ಘಟನ ಅಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






