ಜನಮನ

ಕುಂದಾಪುರದ ವಂಡ್ಸೆ, ಉಡುಪಿ ಜಿಲ್ಲೆಯ ಐದು ಸೇರಿ ಆರು ಗ್ರಾ.ಪಂಗಳಿಗೆ ರಾಷ್ಟ್ರೀಯ ಪ್ರಶಸ್ತಿ

Views: 205

ಕನ್ನಡ ಕರಾವಳಿ ಸುದ್ದಿ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಉತ್ತಮ ಕಾರ್ಯನಿರ್ವಹಣೆಗೆ ನೀಡುವ ರಾಷ್ಟ್ರಮಟ್ಟದ ದೀನ್ ದಯಾಳ್‌ ಉಪಾಧ್ಯಾಯ ಪಂಚಾಯತ್ ರಾಜ್ಯ ವಿಕಾಸ ಪುರಸ್ಕಾರಕ್ಕೆ ರಾಜ್ಯದ ಆರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.

ಉಡುಪಿ ಜಿಲ್ಲೆಯ ಐದು ಪಂಚಾಯಿತಿಗಳು ಆಯ್ಕೆಯಾಗಿದ್ದು, ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ವಿಭಾಗದಲ್ಲಿ ಹೆಬ್ರಿಯ ಮುದ್ರಾಡಿ ಗ್ರಾ.ಪಂ. ಪ್ರಥಮ ಸ್ಥಾನ ಪಡೆದಿದೆ.

(₹ 1ಕೋಟಿ ನಗದು ಬಹುಮಾನ), ಆರೋಗ್ಯಕರ ಪಂಚಾಯಿತಿ ವಿಭಾಗದಲ್ಲಿ ಕುಂದಾಪುರದ ವಂಡ್ಸೆ ಗ್ರಾ.ಪಂ. ಹಾಗೂ ಜಲ ಸಮೃದ್ಧ ವಿಭಾಗದಲ್ಲಿ ಹೆಬ್ರಿಯ ಮಡಾಮಕ್ಕಿ ಗ್ರಾ.ಪಂ. ದ್ವಿತೀಯ ಸ್ಥಾನ ಪಡೆದಿದೆ (₹75 ಲಕ್ಷ ಬಹುಮಾನ).

ಸ್ವಾವಲಂಬಿ ಮೂಲಸೌಕರ್ಯ ವಿಭಾಗದಲ್ಲಿ ಕಾರ್ಕಳದ ಸಾಣೂರು ಗ್ರಾ.ಪಂ., ಸಾಮಾಜಿಕ ನ್ಯಾಯ ಮತ್ತು ಭದ್ರತೆ ವಿಭಾಗದಲ್ಲಿ ಕುಂದಾಪುರದ ಹಕ್ಲಾಡಿ ಪಂಚಾಯಿತಿ ತೃತೀಯ ಸ್ಥಾನಪಡೆದಿದೆ (₹50 ಲಕ್ಷ ನಗದು).

ಮಕ್ಕಳ ಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಬೆಂಗಳೂರು ಪೂರ್ವದ ಹಾಲನಾಯಕನ ಹಳ್ಳಿ ಗ್ರಾ.ಪಂಗೆ ಪುರಸ್ಕಾರ ಲಭಿಸಿದೆ.

Related Articles

Back to top button
error: Content is protected !!