ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾಬುಕಳದಲ್ಲಿ ಸ್ಕೂಟಿಗೆ ಟ್ರಕ್ ಡಿಕ್ಕಿ: ಮಹಿಳೆ ಸಾವು
Views: 588
ಕನ್ನಡ ಕರಾವಳಿ ಸುದ್ದಿ: ಪುತ್ರಿಯೊಂದಿಗೆ ಸಾಲಿಗ್ರಾಮ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾಬುಕಳದಲ್ಲಿ ಸ್ಕೂಟಿಗೆ ಟ್ರಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ಶನಿವಾರ ಸಂಭವಿಸಿದೆ.
ಉಪ್ಪಿನಕೋಟೆ ಸಾಲಿಕೇರಿ ನಿವಾಸಿ ನಿರ್ಮಲಾ (54) ಮೃತ ಮಹಿಳೆ.
ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮದ ಮಾಬುಕಳ ಸೇತುವೆಯ ಬಳಿ ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೋಟ ಕಡೆಗೆ ಬರುತ್ತಿದ್ದಾಗ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿರ್ಮಲಾ ರವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸೇತುವೆಯ ಗಾರ್ಡ್ ಗೆ ಹೊಡೆದು ರಸ್ತೆಗೆ ಬಿದ್ದಿರುತ್ತಾರೆ. ನಿರ್ಮಲಾ ರವರ ತಲೆಗೆ ತೀವ್ರ ತರದ ಗಾಯವಾಗಿ ಹಿಂಬದಿ ಸವಾರಳಾದ ನಿರೀಕ್ಷಾಳ ಬೆನ್ನಿಗೆ ಮುಖಕ್ಕೆ,ಕೈಗೆ ಮತ್ತು ಭುಜಕ್ಕೆ ತೀವ್ರ ತರದ ಗಾಯವಾಗಿರುತ್ತದೆ ಅಲ್ಲಿ ಸೇರಿದ ಸಾರ್ವಜನಿಕರು ನಿರ್ಮಲಾ ಹಾಗೂ ನಿರೀಕ್ಷಾ ರವರನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ನಿರ್ಮಲಾ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ನಿರೀಕ್ಷಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






