ಸಾಂಸ್ಕೃತಿಕ

90ರ ದಶಕದಲ್ಲಿ ಸಿನಿರಸಿಕರ ಮನ ಗೆದ್ದ ಅಭಿಜಿತ್ ಹೇಗಿದ್ದಾರೆ? 

Views: 61

ಕನ್ನಡ ಕರಾವಳಿ ಸುದ್ದಿ:  90ರ ದಶಕದ ಸ್ಫುರದ್ರೂಪಿ ನಟರ ಪಟ್ಟಿಯಲ್ಲಿ ಅಭಿಜಿತ್ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಕೇವಲ ನಟನೆಯಷ್ಟೇ ಅಲ್ಲದೆ, ಗಾಯನ, ನಿರ್ದೇಶನ ಹಾಗೂ ಅದ್ಭುತ ನಿರೂಪಣೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.ಕೇವಲ ನಟನೆಯಷ್ಟೇ ಅಲ್ಲದೆ, ಗಾಯನ, ನಿರ್ದೇಶನ ಹಾಗೂ ಅದ್ಭುತ ನಿರೂಪಣೆಯ ಮೂಲಕ ಗಮನ ಸೆಳೆದಿದ್ದರು.ಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅಭಿಜಿತ್, ಆ ಕಾಲದ ಬಹುತೇಕ ಎಲ್ಲಾ ಸ್ಟಾರ್ ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಅದ್ಭುತ ಪಾತ್ರಗಳಿಂದ ಅಂದಿನ ಕಾಲದಲ್ಲಿ ಸಿನಿರಸಿಕ ಮನ ಗೆದ್ದಿದ್ದರು.ನಾಯಕನಾಗಿ, ಪೋಷಕ ನಟನಾಗಿ ಹಾಗೂ ಖಳನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರಂತಹ ದಿಗ್ಗಜ ನಟರ ಜೊತೆಗೆ ನಟಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.

ಕೇವಲ ಸಿನಿಮಾಗಳಿಗೆ ಸೀಮಿತವಾಗದ ಅಭಿಜಿತ್, ಕಿರುತೆರೆಯ ಇತಿಹಾಸದಲ್ಲಿ ‘ಅಕ್ಷರಮಾಲೆ’ ಎಂಬ ಕಾರ್ಯಕ್ರಮದ ಮೂಲಕ ಕಿರುತೆರೆ ಲೋಕದಲ್ಲಿಯೂ ಸಂಚಲನ ಮೂಡಿಸಿದ್ದರು. ವರ್ಷಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಅವರ ನಿರೂಪಣಾ ಶೈಲಿ ಎಷ್ಟು ಅದ್ಭುತವಾಗಿತ್ತೆಂದರೆ, ‘ಅಕ್ಷರಮಾಲೆ ಅಭಿಜಿತ್’ ಎಂದೇ ಇಂದಿಗೂ ಜನ ಗುರುತಿಸುತ್ತಾರೆ.

ಅಭಿಜಿತ್ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ, ಅವರ ಪತ್ನಿ ಹೆಸರು ರೋಹಿಣಿ. ಈ ದಂಪತಿಗೆ ಬಾಲಾಜಿ ಎಂಬ ಮಗ ಹಾಗೂ ಶಿಲ್ಪಶ್ರೀ ಎಂಬ ಮಗಳಿದ್ದಾಳೆ. ಅಲ್ಲದೆ, ಕಾರ್ತಿಕೇಯ, ಬಾಲಾಜಿ, ಶಿಲ್ಪಶ್ರೀ ಎಂಬ ಮುದ್ದಾದ ಮೊಕ್ಕಳಿದ್ದಾರೆ.

ಸದ್ಯಕ್ಕೆ ಅವರು ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ “ಕರ್ಣ”ದಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೆಳ್ಳಿ ಪರದೆಯ ಮೇಲೆ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರೂ, ಕಲೆಯ ಮೇಲಿನ ಪ್ರೀತಿಯಿಂದ ಇಂದು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಅಭಿಜಿತ್ ಅವರ ಸರಳತೆ ಮತ್ತು ವೃತ್ತಿಪರತೆ ಎಲ್ಲರಿಗೂ ಮಾದರಿಯಾಗಿದೆ.

Related Articles

Back to top button
error: Content is protected !!