ಕೋಟ ಜಾಮಿಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಸಂಭ್ರಮ: ಹಿಂದೂ ಅಶಕ್ತ, ಅನಾರೋಗ್ಯ ಪೀಡಿತರಿಗೆ ನೆರವು
"ಭಕ್ತಿಯೊಂದಿಗೆ ಸಾಮರಸ್ಯದ ಬದುಕಿಗೆ ಮುನ್ನುಡಿ ಬರೆದ ರಂಜಾನ್ ಹಬ್ಬ"
Views: 27
ಕನ್ನಡ ಕರಾವಳಿ ಸುದ್ದಿ: ಕೋಟದ ಜಾಮಿಯಾ ಮಸೀದಿಯಲ್ಲಿ ಸರ್ವಧರ್ಮ ಸಾಮರಸ್ಯವನ್ನು ಉತ್ತೇಜಿಸುವ, ವಿಭಿನ್ನ ಕಾರ್ಯಕ್ರಮ ನಡೆಸುವ ಮೂಲಕ ರಂಜಾನ್ ಹಬ್ಬ ಗಮನ ಸೆಳೆಯಿತು.
ರಂಜಾನ್ ಮಾಸ ಪವಿತ್ರವಾದ ಮಾಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪಸರಿಸಿಕೊಂಡಿದೆ ಎಂದು ಹೂಡೆ ಐಡಿಯಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಇದ್ರಿಸ್ ಹೂಡೆ ಹೇಳಿದರು.
ಶುಕ್ರವಾರ ರಂಜಾನ್ ಹಬ್ಬದ ಪ್ರಯುಕ್ತ ಕೋಟ ಜಾಮಿಯಾ ಮಸ್ಜಿದ್ ಇಲ್ಲಿ ರಮದಾನ್ ಈದ್ ಸಂದೇಶ 2026 ಅರ್ಹರಿಗೆ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಸಹಾಯಧನ ಚೆಕ್ ವಿತರಿಸಿ ಮಾತನಾಡಿ, ಕುರಾನ್ ಉದ್ದೇಶ ಜಗತ್ತಿನಲ್ಲಿ ಸೌಹಾರ್ದತೆ,ಶಾಂತಿ,ನೆಮ್ಮದಿಯ ವಾತಾವರಣದ ಜೊತೆಗೆ ಬೆರೆತು ಜೀವಿಸುವುದಾಗಿದೆ, ಈ ದಿಸೆಯಲ್ಲಿ ರಂಜಾನ್ ಮಾಸದ ಉಪವಾಸ ಅರ್ಥಪೂರ್ಣ ಭಕ್ತಿಯೊಂದಿಗೆ ಸಾಮರಸ್ಯದ ಬದುಕಿಗೆ ಮುನ್ನುಡಿ ಬರೆದಿದೆ ಇದಕ್ಕೆ ಕೋಟದ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ.

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ, ಸಹನೆ ಮತ್ತು ಸಹಾನುಭೂತಿಯನ್ನು ಕಲಿಸುವ ಪವಿತ್ರ ಮಾಸವಾಗಿದೆ. ಇದು ಆತ್ಮಶುದ್ಧಿ, ಸ್ವಯಂ-ಶಿಸ್ತು ಮತ್ತು ಸೌಹಾರ್ದತೆಯ ಸಂಕೇತವಾಗಿದೆ ಎಂದರು.
ಇದೇ ವೇಳೆ ಆಯ್ದ ಹಿಂದೂ ಅಶಕ್ತ, ಅನಾರೋಗ್ಯ ಪೀಡಿತರಿಗೆ ನೆರವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಕೋಟ ತಟ್ಟುವಿನ 8 ಕೊರಗ ಕುಟುಂಬಗಳಿಗೆ ಚೇರ್ ಅನ್ನು ಹಸ್ತಾಂತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಟ ಜಾಮಿಯಾ ಮಸ್ಜಿದ್ ಅಧ್ಯಕ್ಷ ಪ್ಲೆಸೆಂಟ್ ಗೃಹೋಪಕರಣ ಸಂಸ್ಥೆಯ ಇಬ್ರಾಹಿಂ ಸಾಹೇಬ್ ಕೋಟ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಟ ಜಾಮಿಯಾ ಮಸ್ಜಿದ್ ಧರ್ಮಗುರು ಮೌಲಾನಾ ಸಮೀರ‍್ರಾಹಮನ್ ರಂಜಾನ್ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಕೋಟತಟ್ಟು ಪಂಚಾಯತ್ ಪಿಡಿಒ ರವೀಂದ್ರ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಸ್ಜಿದ್ ಸಮಿತಿ ಕಾರ್ಯದರ್ಶಿ ಹಾಗೂ ಪ್ಲೆಸೆಂಟ್ ಗೃಹೋಪಕರಣ ಸಂಸ್ಥೆಯ ಬಷೀರ್ ಸಾಹೇಬ್ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ತೆಕ್ಕಟ್ಟೆ ವಂದಿಸಿದರು. ಇದಾದ ಬಳಿಕ ಸಿಹಿ ಹಂಚಿ ರಂಜಾನ್ ಹಬ್ಬವನ್ನು ಸಂಭ್ರಮ ಆಚರಿಸಿಕೊಂಡರು.






