ಸಾಮಾಜಿಕ

ಮದುವೆಯಾದ ದಿನದಿಂದಲೂ ‘ಫಸ್ಟ್ ನೈಟ್’ ನಡೆಸದೆ ಕಿರುಕುಳ: ಗಂಡನ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ..!

Views: 89

ಕನ್ನಡ ಕರಾವಳಿ ಸುದ್ದಿ:ಮದುವೆಯಾಗಿ ತಿಂಗಳುಗಳೇ ಕಳೆದರೂ ಪತಿ ಲೈಂಗಿಕ ಸಂಬಂಧಕ್ಕೆ ಒಪ್ಪುತ್ತಿಲ್ಲ ಮತ್ತು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪತ್ನಿಯೊಬ್ಬಳು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ನಡೆದಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ವ್ಯಾಪ್ತಿಯ ಗಬ್ಬಲಾಳ ನಿವಾಸಿಯಾದ ರಾಘವೇಂದ್ರ ಎಂಬಾತನೊಂದಿಗೆ ಈ ಮಹಿಳೆಯ ಮದುವೆಯಾಗಿತ್ತು. ಮದುವೆಯಾದ ನಂತರ ಪತಿ ರಾಘವೇಂದ್ರ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ನಿರಾಕರಿಸಿದ್ದಾನೆ ಎಂದು ಪತ್ನಿ ದೂರಿದ್ದಾರೆ. ಮದುವೆಯಾದ ದಿನದಿಂದಲೂ ‘ಫಸ್ಟ್ ನೈಟ್’ ನಡೆಸದೆ, ದೈಹಿಕವಾಗಿ ದೂರ ಉಳಿಯುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆ ವೇಳೆ ಅದ್ದೂರಿಯಾಗಿ ಚಿನ್ನದ ಆಭರಣಗಳನ್ನು ನೀಡಿದ್ದರೂ ಸಹ, ಪತಿ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕೇವಲ ಪತಿ ಮಾತ್ರವಲ್ಲದೆ, ಕುಟುಂಬದ ಇತರ ಸದಸ್ಯರೂ ಸೇರಿ ಮಾನಸಿಕ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ದೈಹಿಕ ಸಂಪರ್ಕವೂ ಇಲ್ಲದೆ, ಕನಿಷ್ಠ ಮಾತೂ ಆಡದೆ ತನ್ನನ್ನು ಅನಾಥೆಯನ್ನಾಗಿ ಬಿಟ್ಟು ಹೋದ ಪತಿಯ ನಡೆಗೆ ಬೇಸತ್ತ ಮಹಿಳೆ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯಪುರ ಪೊಲೀಸರು ಪತಿ ರಾಘವೇಂದ್ರ ಸೇರಿದಂತೆ ಕುಟುಂಬದ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!