ಮದುವೆಗೆ ನೋ ಎಂದ ವರ.. ವಧು, ವಧುವಿನ ತಾಯಿ ವಿಷ ಸೇವಿಸಿ ಆತ್ಮಹತ್ಯೆ
Views: 47
ಕನ್ನಡ ಕರಾವಳಿ ಸುದ್ದಿ: ಮದುವೆ ಮುರಿದು ಬಿದ್ದ ಕಾರಣ ವಧು ಹಾಗೂ ವಧುವಿನ ತಾಯಿ ವಿಷ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ಬಾಪಟ್ಲದಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಒಂದು ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ತಾಯಿ-ಮಗಳು ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಏನಿದು ಪ್ರಕರಣ?
ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯ ಮಾರ್ಟೂರು ಮಂಡಲದ ದ್ರೋಣದುಲ ಗ್ರಾಮದಲ್ಲಿ ವಾಸಿಸುತ್ತಿದ್ದ ಕುಟುಂಬದಲ್ಲಿ ದುರಂತ ಸಂಭವಿಸಿದೆ. ಮೃತರನ್ನು ಸುಜಾತ ಹಾಗೂ ಆಕೆಯ ಮಗಳು ದಿವ್ಯಾ ಎಂದು ಗುರುತಿಸಲಾಗಿದೆ. ಮದುವೆ ಫಿಕ್ಸ್ ಆದ ಬಳಿಕ ಅದ್ಧೂರಿಯಾಗಿ ಎಂಗೆಜ್ಮೆಂಟ್ ಕೂಡ ನಡೆಸಿದ್ದರು. ಆದರೆ ಇನ್ನೇನು ಮದುವೆ ದಿನಾಂಕ ಫೈನಲ್ ಮಾಡಬೇಕಾದ ಸಂದರ್ಭದಲ್ಲಿ ವರ ಮದುವೆಗೆ ನೋ ಎಂದಿದ್ದೆ ದುರಂತಕ್ಕೆ ಕಾರಣವಂತೆ.
ಆದರೆ, ಗುಂಟೂರು ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಜತಾ ಅವರು ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ದಿವ್ಯಾ ಕೂಡ ಸಾವನ್ನಪ್ಪಿದ್ದರು. ಸುಜತಾ ಪತಿ ಶ್ರೀನಿವಾಸರಾವು ಗುಂಟೂರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.






