ಇತರೆ

ಕುಂದಾಪುರ:ಗಂಗೊಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಹಾನಿ

Views: 100

ಕನ್ನಡ ಕರಾವಳಿ ಸುದ್ದಿ: ಗಂಗೊಳ್ಳಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಬೆಂಕಿ ತಗಲಿದ ಪರಿಣಾಮ ಇಲ್ಲಿನ ಕೊಡೇರಿ ಮನೆ ನಿವಾಸಿ ಜಲಜಾ ಪೂಜಾರ್ತಿ ಅವರ ಮನೆಗೆ ಸಂಪೂರ್ಣ ಹಾನಿಗೀಡಾಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಜಲಜಾ ಪೂಜಾರ್ತಿ ಹೊಳೆಗೆ ಮಳಿ ತೆಗೆಯಲು ಹೋಗಿದ್ದಾಗ    ಈ ಘಟನೆ ಸಂಭವಿಸಿದ್ದು,ಅಕ್ಕಪಕ್ಕದವರು, ಗಂಗೊಳ್ಳಿ ಶೌರ್ಯ ವಿಪತ್ತು ನಿರ್ವಹಣ ಘಟಕದ ಸದಸ್ಯರು ಹಾಗೂ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಿದರು.

Related Articles

Back to top button
error: Content is protected !!