ಇತರೆ

ಇನ್‌ಸ್ಟಾಗ್ರಾಮ್‌ನಲ್ಲಿ ಲೈಂಗಿಕ ಕಿರುಕುಳ ಮತ್ತು ಬೆದರಿಕೆ,ನಟಿ ಆಯೇಷಾ ಖಾನ್ ಆತಂಕಕಾರಿ ಹೇಳಿಕೆ

Views: 28

ಕನ್ನಡ ಕರಾವಳಿ ಸುದ್ದಿ: ಗ್ಲಾಮರ್ ಪ್ರಪಂಚದ ಮಿಂಚಿನ ಹಿಂದೆ ಅದೆಷ್ಟು ಕರಾಳತೆ ಅಡಗಿದೆ ಎಂಬುದನ್ನು ಹಿಂದಿ ಬಿಗ್ ಬಾಸ್ ಖ್ಯಾತಿಯ ನಟಿ ಆಯೇಷಾ ಖಾನ್ ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆಯೇಷಾ, ತಾವು 12ನೇ ತರಗತಿಯಲ್ಲಿದ್ದಾಗ ನಡೆದ ನೋವಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಟಿ-ಸೀರೀಸ್‌ನ ದೊಡ್ಡ ಮ್ಯೂಸಿಕ್ ವಿಡಿಯೋವೊಂದರಲ್ಲಿ ಅವರು ಎರಡನೇ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಚಿತ್ರೀಕರಣಕ್ಕೆ ಕೇವಲ ಒಂದು ರಾತ್ರಿ ಬಾಕಿ ಇರುವಾಗ, “ನೀನು ದಪ್ಪಗಿದ್ದೀಯಾ, ನಮ್ಮ ಹಾಡಿಗೆ ಸರಿಹೊಂದುವುದಿಲ್ಲ” ಎಂದು ಹೇಳಿ ಅವರನ್ನು ಯೋಜನೆಯಿಂದ ಕೈಬಿಡಲಾಗಿತ್ತು. ಈ ಘಟನೆಯು ಅವರ ಆತ್ಮವಿಶ್ವಾಸದ ಮೇಲೆ ದೊಡ್ಡ ಹೊಡೆತ ನೀಡಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಯೇಷಾ ಕೇವಲ ಬಾಡಿ ಶೇಮಿಂಗ್‌ಗೆ ಮಾತ್ರವಲ್ಲದೆ, ಇಂಟರ್ನೆಟ್ ಲೋಕದ ವಿಕೃತ ಮನಸ್ಥಿತಿಗೂ ಬಲಿಯಾಗುತ್ತಿದ್ದಾರೆ. “ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಏನೇ ಪೋಸ್ಟ್ ಮಾಡಿದರೂ ಜನರು ನನ್ನ ದೇಹದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ. ಒಂದು ಸಾಧಾರಣ ಟಾಪ್ ಅಥವಾ ಸ್ಕರ್ಟ್ ಧರಿಸಿದರೂ ನನ್ನನ್ನು ಲೈಂಗಿಕವಾಗಿ ಬಿಂಬಿಸಲಾಗುತ್ತದೆ. ಪ್ರತಿ ದಿನವೂ ನನಗೆ ಅತ್ಯಾಚಾರದ ಬೆದರಿಕೆಗಳುಬರುತ್ತವೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಇವು ಕೇವಲ ಕಾಮೆಂಟ್‌ಗಳಲ್ಲ, ಇವುಗಳ ಹಿಂದೆ ಇರುವವರು ನಿಜವಾದ ಮನುಷ್ಯರು ಎಂಬುದು ನೆನಪಾದಾಗ ಭಯವಾಗುತ್ತದೆ. ನಾನು ಇಂದು ಪ್ರಸಿದ್ಧಿಯಾಗದೇ ಇರುತ್ತಿದ್ದರೆ, ಇವರು ಕಾಮೆಂಟ್‌ನಲ್ಲಿ ಹೇಳಿದ್ದನ್ನು ನಿಜವಾಗಿಯೂ ಮಾಡಿಬಿಡುತ್ತಿದ್ದರು ಅನಿಸುತ್ತದೆ.” ಎಂದಿದ್ದಾರೆ.

 

Related Articles

Back to top button
error: Content is protected !!