ಮಗನ ಏಳಿಗೆಗಾಗಿ ಅಣ್ಣನ ಮಗ ಪ್ರಜ್ವಲ್ ಜೈಲು ಪಾಲಾಗಲು ಕುಮಾರಸ್ವಾಮಿಯೇ ಕಾರಣ: ಸ್ಫೋಟಕ ಹೇಳಿಕೆ ನೀಡಿದ ಶಾಸಕ ಕೆ.ಎಂ.ಉದಯ
Views: 42
ಕನ್ನಡ ಕರಾವಳಿ ಸುದ್ದಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ’ ಎಂದು ಶಾಸಕ ಕೆ.ಎಂ.ಉದಯ ಗಂಭೀರ ಆರೋಪ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿಯವರೇ ಕಾರಣ. ತಮ್ಮ ಮಗ ನಿಖಿಲ್ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂಬ ಕಾರಣಕ್ಕೆ ಹಾಗೂ ಪ್ರಜ್ವಲ್‌ನ ರಾಜಕೀಯ ಬೆಳವಣಿಗೆಯನ್ನು ಸಹಿಸಲಾರದೆ ಈ ರೀತಿ ಮಾಡಿದ್ದಾರೆ. ಎಂತೆಂಥವರೋ ಜೈಲಿನಿಂದ ಹೊರಬಂದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿದ್ದರೆ ಪ್ರಜ್ವಲ್‌ನನ್ನು ಬಿಡಿಸಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಆತನನ್ನು ಜೈಲಿಗೆ ಹಾಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕುಮಾರಸ್ವಾಮಿಯವರಿಗೆ ತಮ್ಮ ಕುಟುಂಬ ಮಾತ್ರ ಬೆಳೆಯಬೇಕು ಎಂಬ ಸ್ವಾರ್ಥವಿದೆ. ಅಣ್ಣನ ಮಗನನ್ನೇ ಸಹಿಸದವರು ನಮ್ಮಂಥ ಬಡವರ ಮಕ್ಕಳನ್ನು ಸಹಿಸುತ್ತಾರೆಯೇ? ಕುಟುಂಬದ ಎಲ್ಲರಿಗೂ ಅಧಿಕಾರದಲ್ಲಿ ಜಾಗ ಮಾಡಿಕೊಟ್ಟಿದ್ದಾಗಿದೆ. ಈಗತಾನೇ ಹುಟ್ಟಿರುವ ಮೊಮ್ಮಗನಿಗೂ (ಪಿಳ್ಳೆ) ಒಂದು ಜಾಗ ಕಲ್ಪಿಸಲು ಈಗಿನಿಂದಲೇ ಪ್ರಯತ್ನ ಪಡುತ್ತಿದ್ದಾರೆ. ಬೇರೆಯವರು ಯಾರೂ ತಮ್ಮ ಮುಂದೆ ಬೆಳೆಯಬಾರದು ಎಂಬುದು ಅವರ ಉದ್ದೇಶ. ಹಿಂದೆ ಅವರ ಜೊತೆಯಿದ್ದ ಬಚ್ಚೇಗೌಡ, ನಾಗೇಗೌಡ, ಸಿದ್ದರಾಜು ಮುಂತಾದ ನಾಯಕರನ್ನು ಇವರು ಬೆಳೆಯಲು ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.






