ಸಾಮಾಜಿಕ

ಕಲ್ಯಾಣ ಮಂಟಪದವರೆಗೂ ಬಂದು ಮದುವೆ ಬೇಡ ಎಂದ ವಧು…ಆಮೇಲೆ ನಡೆಯಿತು ಹೈಡ್ರಾಮ!

Views: 128

ಕನ್ನಡ ಕರಾವಳಿ ಸುದ್ದಿ: ಮದುವೆ ಮಂಟಪದವರೆಗೂ ಬಂದ ವಧು ಮದುವೆ ಬೇಡ ಎಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ಶೃಂಗೇರಿ ಪಟ್ಟಣದಲ್ಲಿರುವ ಈಡಿಗರ ಸಮಯದ ಭವನದಲ್ಲಿ ಇಂದು ದೀಕ್ಷಿತ್ ಮತ್ತು ಯುವತಿಯ ಮದುವೆ ಕಾರ್ಯ ನಡೆಯಬೇಕಿತ್ತು. ಆದ್ರೆ ಮದುವೆ ಮಂಟಪದವರೆಗೂ ಬಂದ ಯುವತಿ, ಮದುವೆ ಗಂಡಿನ ಮೇಲೆ ಕೇಸ್‌ ಇದೆ, ಕುಡುಕ ಎಂದು ಮದುವೆ ಬೇಡ ಎಂದು ವಾಪಸ್ ಆಗಿದ್ದಾಳೆ. ಸಂಬಂಧಿಕರು ಯುವತಿಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರು ದಿಕ್ಷೀತ್ ಜೊತೆ ಮದುವೆ ಬೇಡ ಎಂದಿದ್ದಾಳೆ.

ಬಾಳೆಹೊನ್ನೂರು ಮೂಲದ ಯುವತಿ ಮತ್ತು ಶೃಂಗೇರಿ ಪಟ್ಟಣದ ದೀಕ್ಷಿತ್ ನಡುವೆ ಮದುವೆ ನಿಗಧಿಯಾಗಿತ್ತು. ಶೃಂಗೇರಿ ಪಟ್ಟಣದಲ್ಲಿರುವ ಈಡಿಗರ ಸಮಯದ ಭವನ ಮದುವೆಗೆ ಅದ್ಧೂರಿಯಾಗಿ ಸಿದ್ಧತೆ ನಡೆಸಲಾಗಿತ್ತು. ಆದ್ರೆ, ಮದುವೆ ಮಂಟಪಕ್ಕೆ ಬಂದ ವಧು ಮದುವೆ ಬೇಡ ಎಂದು ಹೇಳಿದ್ದಾಳೆ. ವರನ ಮೇಲೆ ರೇಪ್ ಕೇಸ್ ಇದೆ ಎಂಬ ಮಾಹಿತಿ ತಿಳಿದು ವರ ದಿಕ್ಷೀತ್ನನ್ನು ಮದುವೆಯಾಗೋದಕ್ಕೆ ನಿರಾಕರಿಸಿದ್ದಾಳೆ. ಮಂಟಪದವರೆಗೂ ಬಂದ ವಧು ವಾಪಸ್ ಆಗಿದ್ದಾಳೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತ ಚಿತ್ರದುರ್ಗದಲ್ಲಿ ಯುವತಿಯನ್ನು ಪ್ರೀತಿಸಿ ಕಳ್ಳಾಟ ಆಡ್ತಿದ್ದ ಶಿಕ್ಷಕನನ್ನು ಗ್ರಾಮಸ್ಥರು ಹಿಡಿದು ಮದುವೆ ಮಾಡಿಸಿರುವ ಘಟನೆ ನಡೆದಿದೆ. ಪ್ರೀತಿಸಿದ ಹುಡುಗಿಯನ್ನು ಬೇಡ ಅಂದವನಿಗೆ ಅದೇ ಹುಡುಗಿ ಜೊತೆ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ. ಕಾಲುಂಗುರು, ಮಲ್ಲಿಗೆ ಹೂ ಮಾಲೆ ತೊಡಿಸಿ ಶಿಕ್ಷಕ ಯುವತಿಗೆ ತಾಳಿ ಕಟ್ಟಿದ್ದಾನೆ. ಚಿತ್ರದುರ್ಗ ತಾಲೂಕು ಭರಮಸಾಗರ ಗ್ರಾಮದಲ್ಲಿ ಯುವತಿ ಕುಟುಂಬಸ್ಥರು ಮಂತ್ರ ಹೇಳಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ.

ಚಿತ್ರದುರ್ಗ ತಾಲೂಕಿನ ತಣಿಗೆಹಳ್ಳಿ ನಿವಾಸಿ ಹರೀಶ್ ನಾಯಕ ಮತ್ತು ಇಸಾಮುದ್ರ ಗೊಲ್ಲರಹಟ್ಟಿಯ ಯುವತಿ ಸುಮಾರು 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು, ಪರಶುರಾಮಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್, ಇದೇ ಯುವತಿ ಜೊತೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದನು.

ಆದ್ರೆ, ಶಿಕ್ಷಕ ಹರೀಶ್ ಇತ್ತೀಚಿಗೆ ಈ ಯುವತಿಯನ್ನು ಬಿಟ್ಟು ಬೇರೆ ಯುವತಿಯ ಜೊತೆ ಮದುವೆಗೆ ಪ್ಲ್ಯಾನ್ ಮಾಡಿದ್ದನು. ಈ ವಿಷಯ ತಿಳಿದ ಯುವತಿಯ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಕ ಹರೀಶ್ನನ್ನು ಹಿಡಿದು ಯುವತಿ ಜೊತೆ ಮದುವೆ ಮಾಡಿಸಿದ್ದಾರೆ.

Related Articles

Back to top button
error: Content is protected !!