ಜನಮನ

ಪ್ರಜಾವಾಣಿಯ ವರದಿಗಾರ,ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಭಟ್ ಆತ್ಮಹತ್ಯೆಗೆ ಶರಣು 

Views: 196

ಕನ್ನಡ ಕರಾವಳಿ ಸುದ್ದಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ, ಬ್ರಹ್ಮಾವರ ಕ್ರಾಸ್‌ ಲ್ಯಾಂಡ್ ಕಾಲೇಜಿನ ಉಪಪ್ರಾಂಶುಪಾಲ  ಶೇಷಗಿರಿ ಭಟ್ (53) ಅವರು ಇಂದು ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬ್ರಹ್ಮಾವರ ಕ್ರಾಸ್‌ ಲ್ಯಾಂಡ್ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಭಟ್ ಅವರು ಶನಿವಾರ ಬೆಳಿಗ್ಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಾಂತಾರು ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಸುಮಾರು 25 ವರ್ಷಗಳಿಂದ ಕೆಲಸ ಮಾಡಿಕೊಂಡಿರುತ್ತಾರೆ. ಅವರ ಹೆಂಡತಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು, ಮಗ ಶಿವಮೊಗ್ಗದಲ್ಲಿ ದ್ವಿತೀಯ ವರ್ಷದ MBBS ಓದುತ್ತಿರುವುದಾಗಿದೆ. ದಿನಾಂಕ 28/02/2026 ರಂದು ಶೇಷಗಿರಿ ಭಟ್ ರವರು ಬೆಳಿಗ್ಗೆ 07:45 ಗಂಟೆಗೆ ಅವರ ಹೆಂಡತಿಯನ್ನು ಸ್ಕೂಟರಿನಲ್ಲಿ ಬಸ್ಸ್ ಸ್ಟ್ಯಾಂಡ್ ಗೆ ಬಿಟ್ಟು ಬಂದು ಮೂಲ ಮನೆಯಲ್ಲಿ ವಾಸವಾಗಿದ್ದ ತಂದೆ ಹಾಗೂ ಅವರ ಹೆಂಡತಿಗೂ ತಿಂಡಿಯನ್ನೂ ಕೊಟ್ಟು ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವರು ಬೆಳಿಗ್ಗೆ 08:00 ಗಂಟೆಯಿಂದ ಬೆಳಿಗ್ಗೆ 08:45 ಗಂಟೆಯ ಮದ್ಯಾವಧಿಯಲ್ಲಿ ತನ್ನ ವಾಸದ ಮನೆಯ ಮೇಲಿನ ಬೆಡ್ ರೂಮ್ ನಲ್ಲಿ ಒಂದು ಲುಂಗಿಯನ್ನು ಸಿಲಿಂಗ್ ಫ್ಯಾನ್ ಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾನು ಉದ್ಯೋಗದಲ್ಲಿರುವ ಕಾಲೇಜಿನ ದ್ವಿತೀಯ ಪಿಯುಸಿಯ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆಯಿಂದ ಪರೀಕ್ಷಾ ಪ್ರವೇಶ ಪತ್ರ ಬಂದಿರಲಿಲ್ಲ. ಶನಿವಾರ ಪರೀಕ್ಷೆ ಪ್ರಾರಂಭಗೊಳ್ಳಲಿದ್ದು, ಇದೇ ವಿಷಯದಲ್ಲಿ ಹೆಚ್ಚು ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!