ಜನಮನ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಯೆಲ್ಲೋ ಅಲರ್ಟ್, ಎಲ್ಲೆಲ್ಲಿ ಮಳೆ?

Views: 181

ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಬಿಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇನ್ನು ರಾಜ್ಯದಲ್ಲಿ ಅಕಾಲಿಕ ಮಲೆ ಸುರಿಯುತ್ತಿರುವುದರಿಂದ ಇದು ತಾಪಮಾನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಾಪಮಾನದ ಪ್ರವೃತ್ತಿಯು ನಿರಂತರ ಉಷ್ಣತೆಯನ್ನು ಸೂಚಿಸುತ್ತದೆ. ವಿಶೇಷವಾಗಿ ಹಗಲಿನ ವೇಳೆಯಲ್ಲಿ ತಾಪಮಾನ ತೀವ್ರ ಹೆಚ್ಚಲಿದೆ. ನಿವಾಸಿಗಳು ಸ್ಥಳೀಯ ಹವಾಮಾನ ಸಲಹೆಗಳ ಬಗ್ಗೆ ನವೀಕೃತವಾಗಿರಲು ಸೂಚಿಸಲಾಗಿದೆ.

ಹವಾಮಾನ ಅಧಿಕಾರಿಗಳ ಪ್ರಕಾರ, ವಿಶೇಷವಾಗಿ ಮಾರ್ಚ್ ಎರಡನೇ ವಾರದ ನಂತರ ರಾಜ್ಯದಲ್ಲಿ ಶಾಖದ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು.

Related Articles

Back to top button
error: Content is protected !!