ಇತರೆ
ಮಟ್ಕಾ ದಂಧೆಕೋರನ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು
Views: 122
ಕನ್ನಡ ಕರಾವಳಿ ಸುದ್ದಿ: ಮಟ್ಕಾ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆಯಿತು.ಈ ಕ್ರಮವು ಮಟ್ಕಾ ದಂಧೆಕೋರರಿಗೆ ಎಚ್ಚರಿಕೆ ನೀಡುವ ಉದ್ದೇಶ ಹೊಂದಿತ್ತು ಎಂದು ವರದಿಯಾಗಿದೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಪೊಲೀಸರು ಸರಣಿ ದಾಳಿ ನಡೆಸಿ, ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಅಶ್ವಥ್ ಮತ್ತು ಆತನಿಗೆ ಸಾಥ್ ನೀಡುತ್ತಿದ್ದ ಸೊಸೆ ಶಿಲ್ಪಾಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಶ್ವಥ್‌ನನ್ನು ಪೊಲೀಸರು ಪಾವಗಡ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಸಿಕೊಂಡು ಕರೆದೊಯ್ಯುವ ಮೂಲಕ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಾರೆ.
ಇತ್ತೀಚೆಗೆ ಪಾವಗಡ ತಾಲೂಕಿನಾದ್ಯಂತ ಪೊಲೀಸರು ಮಟ್ಕಾ ‘ಬೀಟರ್’ಗಳ ಮೇಲೆ ನಡೆಸಿದ ಸರಣಿ ದಾಳಿಗಳ ವೇಳೆ ಸಿಕ್ಕಿಬಿದ್ದ ಆರೋಪಿಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಅಶ್ವಥ್‌ನನ್ನು ಆತನ ಮನೆಯಿಂದಲೇ ಬಂಧಿಸಲಾಗಿತ್ತು.






