ಯೂಟ್ಯೂಬರ್ ವಿದ್ಯಾರ್ಥಿನಿ ತಾಯಿಗೆ ಮೆಸೇಜ್ ಮಾಡಿ ನೇಣಿಗೆ ಶರಣು
Views: 69
ಕನ್ನಡ ಕರಾವಳಿ ಸುದ್ದಿ: ಯೂಟ್ಯೂಬರ್ ಹಾಗೂ ಬಿಎಸ್ ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮೂಲತಃ ಆಂಧ್ರದ ವಿಶಾಖಪಟ್ಟಣಂನ ಕೋಮಲಿ ಮೃತ ವಿದ್ಯಾರ್ಥಿನಿ. ಕಳೆದ 11 ತಿಂಗಳಿಂದ ಹೈದರಾಬಾದ್ ನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್ ನಲ್ಲಿ ವಾಸಿಸುತ್ತಿದ್ದ ಕೋಮಲಿ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆಯುತ್ತಿದ್ದರು ಜೊತೆಗೆ ಯೂಟ್ಯೂಬರ್ ಕೂಡ ಆಗಿದ್ದಳು.
ಸಾಯುವ ಮುನ್ನ ಕೋಮಲಿ, ಕುವೈಟ್ ನಲ್ಲಿರುವ ತನ್ನ ತಾಯಿ ಸತ್ಯ ವರಲಕ್ಷ್ಮಿಗೆ ಮೆಸೇಜ್ ಕಳುಹಿಸಿದ್ದಳು. ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ ಅಮ್ಮ ಎಂದು ಕಳುಹಿಸಿದ್ದಾಳೆ. ಕಿರಿಯ ಸಹೋದರನನ್ನು ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಬಳಿಕ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ತಾಯಿ ಆಕೆಯ ಸ್ನೇಹಿತರಿಗೆ ತಿಳಿಸಿದ್ದು, ಅವರು ಬಂದು ಬಾಗಿಲು ಬಡಿದಾಗ ತೆರೆದಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ, ಕೋಮಲಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಸಹ – ಯೂಟ್ಯೂಬರ್ ಆಗಿದ್ದ ಯುವಕನೊಬ್ಬನನ್ನು ಕೋಮಲಿ ಪ್ರೀತಿಸುತ್ತಿದ್ದಳು. ಆದ್ರೆ, ಅದೇನಾಯ್ತ ಇಬ್ಬರು ಬೇರೆಯಾಗಿದ್ದರು. ಇದೇ ವಿಚಾರವಾಗಿ ಕೋಮಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






