ಶಿರಸಿ ಮಾರಿಕಾಂಬ ಜಾತ್ರೆಗೆ ವಿಶೇಷ ರೈಲಿನ ವೇಳಾಪಟ್ಟಿ
Views: 42
ಕನ್ನಡ ಕರಾವಳಿ ಸುದ್ದಿ: ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ರೈಲು (06587) ಫೆ.27ರಂದು ರಾತ್ರಿ 10.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 5.05ಕ್ಕೆ ತಾಳಗುಪ್ಪ ತಲುಪಲಿದೆ.
ರೈಲು (06588) ಫೆ.28ರಂದು ಬೆಳಿಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ಸೇರಲಿದೆ.
ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳು, ಆನಂದಪುರಂ, ಅಡ್ಡೇರಿ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಜಾತ್ರೆಯ ಅಂಗವಾಗಿ ಯಶವಂತಪುರ–ಶಿವಮೊಗ್ಗ ನಡುವೆ ಸಂಚರಿಸುವ ರೈಲನ್ನು (16581/16582) ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಯಶವಂತಪುರದಿಂದ ಹೊರಡುವ ರೈಲು ಶಿವಮೊಗ್ಗದ ಬದಲಾಗಿ ತಾಳಗುಪ್ಪವರೆಗೆ ಸಂಚರಿಸಲಿದೆ. ಈ ರೈಲು ಶಿವಮೊಗ್ಗದ ಬದಲು ತಾಳಗುಪ್ಪದಿಂದಲೇ ಪ್ರಯಾಣ ಆರಂಭಿಸಲಿದೆ. ಈ ವಿಸ್ತರಣೆಯು ಒಂದು ಟ್ರಿಪ್‌ಗೆ ಮಾತ್ರ ಅನ್ವಯಿಸಲಿದೆ.
ಮಾರ್ಚ್ 1ರಂದು ಯಶವಂತಪುರದಿಂದ ರಾತ್ರಿ 12.15ಕ್ಕೆ ಹೊರಟು ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದ ಹೊರಟು, ಮರುದಿನ ಬೆಳಿಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.
ಶಿವಮೊಗ್ಗದಿಂದ ಮುಂದಕ್ಕೆ ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳು, ಆನಂದಪುರಂ, ಅಡ್ಡೇರಿ ಹಾಗೂ ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.






