ಇತರೆ

33 ಮಕ್ಕಳನ್ನು ಅಪಹರಿಸಿ ಲೈಂಗಿಕ ಶೋಷಣೆ,ಅಶ್ಲೀಲ ವೀಡಿಯೊ ತಯಾರಿಸಿ ಡಾರ್ಕ್ ವೆಬ್‌ನಲ್ಲಿ ಅಪ್ಲೋಡ್:  ದಂಪತಿಗೆ ಗಲ್ಲು

Views: 98

ಕನ್ನಡ ಕರಾವಳಿ ಸುದ್ದಿ: ಬಂದಾ, ಚಿತ್ರಕೂಟ ಸುತ್ತಮುತ್ತಲ ಪ್ರದೇಶಗಳಿಂದ ಪುಟ್ಟ ಮಕ್ಕಳನ್ನು ಅಪಹರಿಸಿ, ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ ಅಶ್ಲೀಲ ವೀಡಿಯೊ ತಯಾರಿಸಿ ಡಾರ್ಕ್ ವೆಬ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಉತ್ತರ ಪ್ರದೇಶದ ಬಂದಾದಲ್ಲಿನ ಕ್ರಿಮಿನಲ್ ದಂಪತಿಗೆ ವಿಶೇಷ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

6 ವರ್ಷಗಳ ಹಿಂದೆ ಚಿತ್ರಕೂಟ ಪ್ರದೇಶದಲ್ಲಿ 33 ಮಕ್ಕಳ ಅಪಹರಣವಾಗಿತ್ತು. ಮಕ್ಕಳ ಸರಣಿ ಅಪಹರಣ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ವಹಿಸಲಾಯಿತು.

ತನಿಖೆ ನಡೆಸಿದಾಗ ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ರಾಮ್ ಭವನ್ ಮತ್ತು ಪತ್ನಿ ದುರ್ಗಾವತಿ ಮಕ್ಕಳನ್ನು ಅಪಹರಿಸಿ ಬಂಧನದಲ್ಲಿರಿಸಿ ಲೈಂಗಿಕವಾಗಿ ಶೋಷಣೆ ಮಾಡಿ ಅದರ ವಿಡಿಯೊಗಳನ್ನು ಸಿದ್ಧಪಡಿಸಿ ಅಂತರ್ಜಾಲದಲ್ಲಿ ಮಾರಾಟಕ್ಕಿಡುತ್ತಿದ್ದ ಸಂಗತಿ ಬಯಲಾಯಿತು. ಆರೋಪಿ ದಂಪತಿ 5ರಿಂದ 16 ವರ್ಷದವರೆಗಿನ ಮಕ್ಕಳನ್ನು ಅಪಹರಿಸುತ್ತಿತ್ತು. 2020ರ ಅಕ್ಟೋಬರ್‌ನಲ್ಲಿ ದಂಪತಿಯನ್ನು ಬಂಧಿಸಿದ ಸಿಬಿಐ, ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ವಿವಿಧ ಅಪರಾಧಗಳಡಿ ದೋಷಾರೋಪ ಪಟ್ಟಿ ಸಲ್ಲಿಸಿತು. ಐದೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ದಂಪತಿಗಳಿಬ್ಬರೂ ಅಪರಾಧಿಗಳು ಎಂದು ಶುಕ್ರವಾರ ತೀರ್ಪು ಪ್ರಕಟಿಸಿತು. ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ.

ದಂಪತಿಯಿಂದ ಖರೀದಿಸಿದ ಅಶ್ಲೀಲ ವಿಡಿಯೊಗಳನ್ನು ಅಂತಾರಾಷ್ಟ್ರೀಯ ಜಾಲದವರು, ಎನ್ಶಿಪ್ಟ್ ಮಾಡಿದ ಪ್ಲಾಟ್‌ಫಾಮ್ ಗಳಲ್ಲಿ ಮತ್ತು ಡಾಕ್‌ನೆಟ್ ವೆಬ್ ಚಾನೆಲ್‌ಗಳಲ್ಲಿ ಆಸಕ್ತ ಖರೀದಿದಾರರಿಗೆ ಹಂಚಿ ಹಣ ಮಾಡುತ್ತಿದ್ದರು ಎಂದು ಸಿಬಿಐ ವರದಿಯಲ್ಲಿ ಹೇಳಿತ್ತು.

ಸಂತ್ರಸ್ತ ಕುಟುಂಬಗಳಿಗೆ ತಲಾ 10 ಲಕ್ಷ ರು. ಪರಿಹಾರ ನೀಡುವಂತೆಯೂ ನ್ಯಾಯಾಲಯ ಆರೋಪಿ ದಂಪತಿಗೆ ಆದೇಶಿಸಿದೆ.

Related Articles

Back to top button
error: Content is protected !!