ಇತರೆ

ಚಾಕೊಲೇಟ್ ಆಸೆ ತೋರಿಸಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೃದ್ಧ ಅರೆಸ್ಟ್ 

Views: 49

ಕನ್ನಡ ಕರಾವಳಿ ಸುದ್ದಿ: ಚಾಕೊಲೇಟ್ ಆಸೆ ತೋರಿಸಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 64 ವರ್ಷದ ವೃದ್ಧನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪೋಷಕರು ಬೆಳಗ್ಗೆ 8.30ಕ್ಕೆ ಮಕ್ಕಳನ್ನು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. 10 ಗಂಟೆಗೆ ಶಾಲೆ ಆರಂಭವಾದರೂ ಬಾಲಕಿಯರು ಎಂಟೂವರೆಗೆ ಬರುತ್ತಿದ್ದನ್ನು ಮನಗಂಡ ವೃದ್ಧ ಮಕ್ಕಳಿಗೆ ಚಾಕೋಲೆಟ್‌ ಆಸೆ ತೋರಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದ.

ಶುಕ್ರವಾರ ಎರಡನೇ ತರಗತಿಯ ಬಾಲಕಿಗೆ ವೃದ್ಧ ಲೈಂಗಿಕ ಕಿರುಕುಳ ಕೊಟ್ಟಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದರು. ವಿಚಾರಣೆ ಮಾಡಿದ ವೇಳೆ ಮೂರು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆನೇಕಲ್ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!