ಇತರೆ

ಉಡುಪಿ: ಫೇಸ್‌ಬುಕ್ ಮೂಲಕ ಸ್ನೇಹ ಬೆಳಸಿ ಉಡುಗೊರೆ ಕಳುಹಿಸುವುದಾಗಿ ಮಹಿಳೆಗೆ 7,10,000ರೂ ಆನ್‌ಲೈನ್ ವಂಚನೆ

Views: 46

ಕನ್ನಡ ಕರಾವಳಿ ಸುದ್ದಿ: ಫೇಸ್‌ಬುಕ್ ಮೂಲಕ ಸ್ನೇಹ ಬೆಳಸಿ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣಿ(37) ಎಂಬವರಿಗೆ ಫೆ.4ರಂದು ಫೇಸ್ ಬುಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂದೇಶ ಕಳುಹಿಸಿದ್ದು ನಂತರ ರಾಣಿ ಹಾಗೂ ಅಪರಿಚಿತ ವ್ಯಕ್ತಿಗಳು ಮೆಸೆಂಜರ್ ಹಾಗೂ ವಾಟ್ಯಾಪ್ ಮೂಲಕ ಚಾಟ್ ಮಾಡುತ್ತಿದ್ದರು. ಫೆ.8ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ಚಿನ್ನಾಭರಣ, ಮೊಬೈಲ್ ಹಾಗೂ ಇತರೇ ವಸ್ತುಗಳನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದ್ದು, ಈ ಪಾರ್ಸೆಲ್‌ನಲ್ಲಿ ಡಾಲ‌ರ್ ಇರುವುದರಿಂದ ಅದಕ್ಕಾಗಿ 45,000ರೂ. ಹಣ ಪಾವತಿಸಬೇಕು ಎಂದು ತಿಳಿಸಿದ್ದನು.

ಅದನ್ನು ನಂಬಿದ ರಾಣಿ, ಅಪರಿಚಿತನ ಖಾತೆಗೆ ಹಣ ಹಾಕಿದ್ದರು. ಬಳಿಕ ಅಪರಿಚಿತ ಕರೆ ಹಾಗೂ ಮೆಸೇಜ್ ಮೂಲಕ ಟ್ಯಾಕ್ಸ್‌ ಹಾಗೂ ಇತರೇ ಶುಲ್ಕ ಪಾವತಿ ಮಾಡುವಂತೆ ತಿಳಿಸಿದ್ದು, ಅದನ್ನು ಕೂಡ ನಂಬಿದ ರಾಣಿ, ತಮ್ಮ ಖಾತೆಯಿಂದ ಹಂತ ಹಂತವಾಗಿ ಒಟ್ಟು 7,10,000ರೂ. ಹಣವನ್ನು ಅಪರಿಚಿತನ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರವೂ ಅಪರಿಚಿತ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಇದರಿಂದ ಆತ ಮೋಸ ಮಾಡು ತ್ತಿರುವುದು ರಾಣಿ ಗಮನಕ್ಕೆ ಬಂತೆನ್ನಲಾಗಿದೆ.

Related Articles

Back to top button
error: Content is protected !!