ಇತರೆ
ಕುಂದಾಪುರ: ಕೆದೂರು ಫ್ರೌಢ ಶಾಲೆಯ ಆವರಣಕ್ಕೆ ನುಗ್ಗಿ ಕಿಡಿಗೇಡಿಗಳಿಂದ ಹಾನಿ, ದೂರು
Views: 96
ಕನ್ನಡ ಕರಾವಳಿ ಸುದ್ದಿ: ಸರಕಾರಿ ಫ್ರೌಡಶಾಲೆ ಕೆದೂರು ಇಲ್ಲಿನ ಶಾಲಾ ಗೇಟಿನ ಬೀಗ ತೆಗೆದು ನೋಡುವಾಗ ಯಾರೋ ಕಿಡಿಗೇಡಿಗಳು ಶಾಲಾ ಆವರಣಕ್ಕೆ ನುಗ್ಗಿ ಶಾಲೆಯ ನೋಟೀಸ್ ಭೋರ್ಡ್ ಗ್ಲಾಸನ್ನು ಒಡೆದಿರುತ್ತಾರೆ.
ಅಲ್ಲದೇ ಒಂದು ತರಗತಿ ಕೋಣೆಗೆ ನುಗ್ಗಿ ಅಲ್ಲಿ ಗೋಡೆಗೆ ಅಳವಡಿಸಿರುವ ಬ್ಯಾನರ್ಗಳನ್ನು ಕೆಳಗೆ ಹಾಕಿರುತ್ತಾರೆ ಮತ್ತು ಆ ಕೋಣೆಯಲ್ಲಿ ಬೆಂಕಿ ಪೆಟ್ಟಿಗೆ ಹಾಗೂ ಟಿಶ್ಯೂ ಪೇಪರ್ ಗಳು ಕಂಡುಬಂದಿರುತ್ತದೆ. ಅಲ್ಲದೇ ಹುಡುಗರ ಟಾಯ್ಲೇಟ್ನಲ್ಲಿರುವ ಟ್ಯಾಪ್ ಗಳನ್ನು ಕಿತ್ತು ಹಾಕಿರುತ್ತಾರೆ. ಕೈ ತೊಳೆಯುವ ಸ್ಟೀಲ್ ಸಿಂಕನ್ನು ಕಿತ್ತು ಶಾಲೆಯ ಮಧ್ಯದ ಗ್ರೌಂಡ್ ನಲ್ಲಿ ಬಿಸಾಡಿರುವುದಾಗಿ ಫ್ರಭಾರ ಮುಖ್ಯೋಪಾಧ್ಯಾಯರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






