ರಾಜಕೀಯ

ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ…ಡಿ.ಕೆ.ಸುರೇಶ್‌ ಮಾತಿಗೆ ಸಿದ್ದರಾಮಯ್ಯ ಗರಂ!

Views: 47

ಕನ್ನಡ ಕರಾವಳಿ ಸುದ್ದಿ: ಅಧಿಕಾರ ಹಂಚಿಕೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಪದೇ ಪದೇ ಅದೇ ವಿಚಾರವನ್ನ ಯಾಕೆ ಕೇಳ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕಮಾಂಡ್‌ ಹೇಳಿದಂತೆ ಕೇಳುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ರಾಜಕಾರಣಕ್ಕಾಗಿ ದೆಹಲಿಗೆ ಹೋಗುತ್ತಿರುವುದಾಗಿ ಡಿಕೆಶಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ನಡುವೆ ಈ ವಿಚಾರದ ಬಗ್ಗೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಿಎಂ ಸಿದ್ದರಾಮಯ್ಯ ಗರಂ ಆದರು.ದೆಹಲಿಗೆ ಹೊರಡುವ ಮುನ್ನಾ ಒಪ್ಪಂದದ ಬಗ್ಗೆ ಡಿಸಿಎಂ ಡಿಕೆಶಿವಕುಮಾರ್‌ ಮಾತನಾಡಿದ್ದಾರೆ. ಕದ್ದು ಮುಚ್ಚಿ ಮಾತಾಡಿಲ್ಲ. ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಹೈಕಮಾಂಡ್‌ ಮುಂದೆ ಮಾತುಕತೆ ಆಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವಿಚಾರ ಪ್ರಸ್ತಾಪಿಸಿ ಡಿಕೆ ಸುರೇಶ್‌ ಕೂಡ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಂಸದ‌ ಡಿ.ಕೆ. ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನನಗೆ ಈಗಲೂ ಭರವಸೆ ಇದೆ. ಸಿದ್ದರಾಮಯ್ಯ ನಿಧಾನವಾದ್ರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ನನ್ನ ತಂದೆ ಪೂರ್ಣಾವಧಿ ಸಿಎಂ ಎಂಬ ಪುತ್ರ ‌ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಅವರ ಮಾತೇ ನಮಗೆ ವೇದ ವಾಕ್ಯ , ಅವರು ಹೇಳಿದ ಮೇಲೆ ಅದೇ ಫೈನಲ್ ಎಂದು ತಿರುಗೇಟು ನೀಡಿದ್ದಾರೆ.

ಸುರೇಶ್‌ ಮಾತಿನ ಬಗ್ಗೆ ಪ್ರಶ್ನೆಗೂ ಸಿದ್ದರಾಮಯ್ಯ ಗರಂ ಆಗಿದ್ದರು. ಅದರ ಬಗ್ಗೆ ಸುರೇಶ್‌ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿಯಲ್ಲಿ ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ. ಡಿಕೆ ಸುರೇಶ್ ರವರ ಹೇಳಿಕೆಗೆ ಅಣ್ಣ ಡಿಕೆ ಶಿವಕುಮಾರ್ ‌ ಮುಗುಳ್ನಕ್ಕಿದ್ದಾರೆ. ನಾನು ಕಾಲ ಉತ್ತರ ಕೊಡುತ್ತೆ ಅಂತಾ ಹೇಳಿದಿನಿ. ನಾನು ಏನು ಮಾತನಾಡಿದ್ದೀವಿ, ನಮಗೆ ಮಾತ್ರ ಗೊತ್ತು ಅಂತಾ ಹೇಳಿದ್ದೀನಿ. ಟೈಮ್ ನೋಡಿ ಹೇಳುತ್ತೇನೆ. ರಾಹುಲ್ ಗಾಂಧಿ ಭೇಟಿಯಾಗಲು ನಾನು ಇನ್ನೂ ಸಮಯ ಕೇಳಿಲ್ಲ. ಪ್ರಿಯಾಂಕಾ ಗಾಂಧಿ ಭೇಟಿಯಾಗಿ ಅಸ್ಸಾಂ ಚುನಾವಣೆ ವಿಚಾರದ ಬಗ್ಗೆ ಮಾತಾಡಿದ್ದೇನೆ. ನಾನು ಯಾರನ್ನ ಭೇಟಿ ಮಾಡಿಲ್ಲ. ಯಾಕೆ ಸುಮ್ಮನೇ ವಿಭಿನ್ನ ರೀತಿಯಲ್ಲಿ ಬೇಡ, ಮಾತ‌ನಾಡುತ್ತೆೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Related Articles

Back to top button
error: Content is protected !!