ಸ್ವಸ್ತಿ! ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ದಿನ ೧ ಸಲುವ ಮಾಘ ಕೃಷ್ಣ ೧೨ ಯು ದಿನಾಂಕ: 14-02-2026ನೇ ಶನಿವಾರದಿಂದ ಆರಂಭಿಸಿ ದಿನಾಂಕ : 15-02-2026ನೇ ಆದಿತ್ಯವಾರ ಪರ್ಯಂತ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಹೊಸೂರು ಸಣ್ಣಮ್ಮ ಸಪರಿವಾರ ದೈವಸ್ಥಾನದ ದಿವ್ಯ ಸನ್ನಿಧಿಯಲ್ಲಿ
ಹಾಲು ಹಬ್ಬ, ಗಂಡಸೇವೆ, ಢಕ್ಕೆಬಲಿ ತುಲಾಭಾರ ಸೇವೆ
ಧಾರ್ಮಿಕ ಕಾರ್ಯಕ್ರಮಗಳು
ದಿನಾಂಕ : 14-02-2026 ಶನಿವಾರ ಸಂಜೆ ಗಂಟೆ 5-30ಕ್ಕೆ ಸಾಮೂಹಿಕ ಪ್ರಾರ್ಥನೆ, ನಾಗನಿಗೆ ಹಾಲಿಟ್ಟು ಸೇವೆ, ಬ್ರಹ್ಮಮಂಡಲ, ಮಹಾಪೂಜೆ, ದೇವಿಯ ದರ್ಶನ, ಗೆಂಡಸೇವೆ, ಮಹಾಪ್ರಸಾದ ವಿತರಣೆ—ಸಾಮೂಹಿಕ ಅನ್ನಸಂತರ್ಪಣೆ
ರಾತ್ರಿ ಗಂಟೆ 8-00 ಗೆಂಡ ಸೇವೆ
ದಿನಾಂಕ : 15-02-2026 ಆದಿತ್ಯವಾರ ಬೆಳಿಗ್ಗೆ 7-00 ರಿಂದ– ಢಕ್ಕೆಬಲಿ
ಶ್ರೀ ದೇವರ ಇಚ್ಛೆ ಹಾಗೂ ಸಕಲ ಜನರ ಪ್ರೋತ್ಸಾಹದಿಂದಲೇ ನಡೆಯುವ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಆಗಮಿಸಿ, ತನು-ಮನ-ಧನ ಸಹಾಯವನ್ನು ಕೊಟ್ಟು, ನಮ್ಮನ್ನು ಪ್ರೋತ್ಸಾಹಿಸಿ, ಶ್ರೀ ದೇವಿಯ ಪವಿತ್ರ ಪ್ರಸಾದವನ್ನು ಸ್ವೀಕರಿಸಿ, ಸಪರಿವಾರ ಸಣ್ಣಮ್ಮ ದೇವಿಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಅರ್ಚಕರು,ಮೊಕ್ತೇಸರರು, ಪಾತ್ರಿಗಳು,ಆಡಳಿತ ಮಂಡಳಿ ಹಾಗೂ ಊರಿನ ಹತ್ತು ಸಮಸ್ತರು ಮತ್ತು ನಂಬಿದ ಸಕಲ ಭಕ್ತ ಮಹಾಶಯರು