ಇತರೆ

ಸಂತ್ರಸ್ತ ಕುಟುಂಬಕ್ಕೆ ಜ್ಯೋತಿಷಿ ಕಮಲಾಕರ ಭಟ್ 1 ಕೋಟಿ ಪರಿಹಾರ ನೀಡುವಂತೆ ಆಗ್ರಹ

Views: 76

ಕನ್ನಡ ಕರಾವಳಿ ಸುದ್ದಿ:  ಸಿದ್ದಾಪುರದಲ್ಲಿ ಕೊಲೆಯಾದ ವ್ಯಕ್ತಿಯ ಕುಟುಂಬ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಕೊಲೆಯಾದ ವಸಂತ್ ನಾಯ್ಕ್ ಕುಟುಂಬ ಬಡತನದಲ್ಲಿದೆ. ಆದ್ದರಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಕಮಲಾಕರ ಗುರೂಜಿ 1 ಕೋಟಿ ಪರಿಹಾರ ನೀಡುವಂತೆ ಪ್ರತಿಭಟನಾಕಾರರ ಆಗ್ರಹಿಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಹರಸಾಹಸ ಪಟ್ಟಿದ್ದು, ಎಸ್ಪಿ ಮಧ್ಯಪ್ರವೇಶದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅವರಗುಪ್ಪ ಗ್ರಾಮದಲ್ಲಿ ಗಂಡ-ಹೆಂಡತಿ ಮಹೇಶ್- ಸುಚಿತ್ರಾ ನಡುವೆ ನಡೆಯುತ್ತಿದ್ದ ಜಗಳದ ಮಧ್ಯೆ ವಸಂತ್ ನಾಯ್ಕ್ ಬಂದಿದ್ದಾರೆ. ವಸಂತ್ ನಾಯ್ಕ್ ಗೆ ಸುಚಿತ್ರಾ ಟೀಮ್ ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಈ ಕೇಸ್ನಲ್ಲಿ ಜ್ಯೋತಿಷಿ ಕಮಲಾಕರ್ ಪಾತ್ರ ಕೂಡ ಇದ್ದು ಜ್ಯೋತಿಷಿಯ ಬಂಧನವಾಗಿದೆ.

Related Articles

Back to top button
error: Content is protected !!