ಇತರೆ
ಸಾಮಾಜಿಕ ಜಾಲತಾಣದಲ್ಲಿ ಧರ್ಮಗಳ ನಡುವೆ ದ್ವೇಷ ಪ್ರಚೋದನೆ ಆರೋಪ: ಇಬ್ಬರಿಗೆ ಜಾಮೀನು ಮಂಜೂರು
Views: 44
ಕನ್ನಡ ಕರಾವಳಿ ಸುದ್ದಿ: ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಇಲ್ಲಿನ ಸಂತೋಷ್ ಹಾಗೂ ನಾಗರಾಜ ಕೋಟೇಶ್ವರ ಅವರಿಗೆ ಜಾಮೀನು ಮಂಜೂರಾಗಿದೆ.
ಅವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
“ಶಿರಡಿ ಸಾಯಿ ಬಾಬಾ ಜೇಬಿಗೆ ಹಾಕಿದ ಹಿಂದೂಗಳ ಹಣ ಎಲ್ಲಿಗೆ ಹೋಗುತ್ತದೆ, ನೀವೇ ನೋಡಿ. ದೇಶದ ಎಲ್ಲಾ ಹಿಂದೂಗಳಿಗೆ ಅದು ತಲುಪಬೇಕು” ಎಂಬ ಅರ್ಥದ ವಿಡಿಯೋವನ್ನು ವಾಟ್ಸಪ್ ಗ್ರೂಪ್‌ಗೆ ಶೇರ್ ಮಾಡಿದ್ದರು. ಈ ಬಗ್ಗೆ ಜಾಮೀನು ರಹಿತ ಪ್ರಕರಣ ದಾಖಲಾಗಿತ್ತು.
ಆರೋಪಿಗಳಿಗೆ ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿಗಳಾದ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಕಾಳಾವರ ಉದಯ್ ಶೆಟ್ಟಿ ವಾದಿಸಿದ್ದರು.






