ಫೆ.18ರಿಂದ 21ರವರೆಗೆ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರಿನಲ್ಲಿ ಹಾಲುಹಬ್ಬ- ಗೆಂಡಸೇವೆ – ಪ್ರತಿಷ್ಠಾ ವರ್ಧಂತ್ಯುತ್ಸವ
Views: 119
ಆತ್ಮೀಯ ಭಕ್ತಾಭಿಮಾನಿಗಳೇ,
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೬ ಸಲುವ ಮಾಘ ಬಹುಳ ೨೧ಯು ತಾ. 19-02-2026ನೇ ಗುರುವಾರದಿಂದ ತಾ. 21-02-2026ನೇ ಶನಿವಾರದ ಪರ್ಯಂತ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ
ಹಾಲುಹಬ್ಬ, ಗೆಂಡಸೇವೆ ಮತ್ತು ವಾರ್ಷಿಕ ಪೂಜೆ
ಹಾಗೂ ಕುಂಭ ಮಾಸ ೫ ಸಲುವ ಮಾಘ ಬಹುಳ ೨೦ಯು ತಾ. 18-02-2026ನೇ ಬುಧವಾರ
ಪ್ರತಿಷ್ಠಾ ವರ್ಧಂತ್ಯುತ್ಸವ
ದೇವಳದ ತಂತ್ರಿಯವರಾದ ವೇದಮೂರ್ತಿ ಶ್ರೀ ಎನ್. ರಮೇಶ್ ಭಟ್ ರವರ ನೇತೃತ್ವದಲ್ಲಿ ಜರಗಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ಶ್ರೀ ದೇವತಾ ಕಾರ್ಯದಲ್ಲಿ ಭಾಗವಹಿಸಿ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ
ಆಡಳಿತ ಧರ್ಮದರ್ಶಿ
ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಮತ್ತು ಆಡಳಿತ ಮಂಡಳಿ
ಧಾರ್ಮಿಕ ಕಾರ್ಯಕ್ರಮಗಳು
18-02-2026 ನೇ ಬುಧವಾರ
ಬೆಳಿಗ್ಗೆ ಗಂಟೆ 8.00ರಿಂದ
ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಪತಿ ಹೋಮ, ರುದ್ರ ಹೋಮ, ಚಂಡಿಕಾಯಾಗ, ನಾಗಸನ್ನಿಧಿಯಲ್ಲಿ ನವಕ ಪ್ರಧಾನ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ
ಮಧ್ಯಾಹ್ನ ಗಂಟೆ 1.00ರಿಂದ ಅನ್ನಸಂತರ್ಪಣೆ
ಸಂಜೆ ಗಂಟೆ 5.00 ರಿಂದ
ದುರ್ಗಾಪೂಜೆ-ಕುಮಾರ ಪರಿವಾರ ದೈವಗಳಿಗೆ ಪಂಚವಿಂಶತಿ ಕಲಶ ಸ್ಥಾಪನಾ ಅಧಿವಾಸ ಹೋಮ, ಕಲಶಾಭಿಷೇಕ ಪೂಜೆ
19-02-2026ನೇ ಗುರುವಾರ
ಬೆಳಿಗ್ಗೆ ಗಂಟೆ 7.30ರಿಂದ
ಶ್ರೀ ವೀರಭದ್ರ ದೇವರಿಗೆ ಅಷ್ಟೋತ್ತರ ಶತಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಷೇಕ, ಗಣಪತಿಗೆ ಪಂಚವಿಂಶತಿ ಕಲಶ ಸ್ಥಾಪನೆ, ಸಪನಾಧಿವಾಸ ಹೋಮ, ಭದ್ರಕಾಳಿ ದೇವರಿಗೆ ನವಕ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ
ಮಧ್ಯಾಹ್ನ ಗಂಟೆ 1.00 ರಿಂದ : ಅನ್ನಸಂತರ್ಪಣೆ
ಸಂಜೆ ಗಂಟೆ 3.00ಕ್ಕೆ : ನಲ್ಕುದ್ರು ಭಂಡಾರದ ಮನೆಯಿಂದ ದೇವರ ಬಾಳು ಭಂಡಾರ ತರುವುದು
ಸಂಜೆ ಗಂಟೆ 3.00ರಿಂದ : ಭಜನಾ ಕಾರ್ಯಕ್ರಮ
ರಾತ್ರಿ ಗಂಟೆ 7.00 ರಿಂದ : ರಂಗಪೂಜೆ ರಾತ್ರಿ ಗಂಟೆ 8.00ರಿಂದ :ಬಲಿ ಉತ್ಸವ, ಕ್ಷೇತ್ರಪಾಲ ಪೂಜೆ, ಅಷ್ಟಾವಧಾನ ಸೇವೆ
ರಾತ್ರಿ ಗಂಟೆ 9.00ರಿಂದ : ಗೆಂಡ ಸೇವೆ ರಾತ್ರಿ ಗಂಟೆ 10.00ಕ್ಕೆ : ಪ್ರಸಾದ ವಿತರಣೆ
20-02-2026 ಶುಕ್ರವಾರ ಬೆಳಿಗ್ಗೆ ಗಂಟೆ 7.15ಕ್ಕೆ : ಮೂಡುಗಣಪತಿ ಸೇವೆ ಬೆಳಿಗ್ಗೆ ಗಂಟೆ 8.30ಕ್ಕೆ : ಬೆಳಿಗ್ಗೆ ಗಂಟೆ 9.30ರಿಂದ : ಢಕ್ಕೆ ಬಲಿ ಮತ್ತು ದರ್ಶನ ಸೇವೆ
ನಾಗದೇವರಿಗೆ ಹಾಲು ಹಿಟ್ಟು ಸೇವೆ
ಬೆಳಿಗ್ಗೆ ಗಂಟೆ 11.00ರಿಂದ : ತುಲಾಭಾರ, ಹರಿವಾಣ ನೈವೇದ್ಯ, ಕುಂಕುಮಾರ್ಚನೆ, ಮಂಗಳಾರತಿ ಮತ್ತಿತರ ಸೇವೆಗಳು
ಮಧ್ಯಾಹ್ನ ಗಂಟೆ 12.30ರಿಂದ :ಮಹಾಪೂಜೆ
ಮಧ್ಯಾಹ್ನ ಗಂಟೆ 12.45ರಿಂದ : ಭೂತಬಲಿ, ಹಚ್ಚಡ ಸೇವೆ, ಬೆಣಗಲ್ಲು ಕಾಯಿ ಒಡೆಯುವುದು
ಮಧ್ಯಾಹ್ನ ಗಂಟೆ 2.00ರಿಂದ :ಅನ್ನಸಂತರ್ಪಣೆ
ರಾತ್ರಿ ಗಂಟೆ 9.00ರಿಂದ : ಕುಮಾರ ಮಂದಿರದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ
21-02-2026 ರಂದು ಬೆಳಿಗ್ಗೆ ಗಂಟೆ 9.30ರಿಂದ ಮಹಾ ಸಂಪ್ರೋಕ್ಷಣೆ ಹಾಗೂ ಶುದ್ಧ ಕಲಶ
ಶ್ರೀ ದೇವರ ಭಂಡಾರವನ್ನು ಭಂಡಾರದ ಮನೆಗೆ ಕೊಂಡು ಹೋಗುವುದು.
ಮನವಿ
ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳಾದ ದೇವಸ್ಥಾನದ ಒಳಗಡೆ ಗ್ರಾನೈಟ್ ಅಳವಡಿಕೆ, ಗರ್ಭಗುಡಿ ದ್ವಾರಗಳಿಗೆ ಹಿತ್ತಾಳೆ ಹೊದಿಕೆ, ಪೌಳಿಗೆ ಗ್ರಾನೈಟ್, ಕಂಬಗಳ ವಿನ್ಯಾಸ, ಸಭಾಂಗಣ, ಭೋಜನಾಲಯ, ಊಟದ ಮೇಜು-ಕುರ್ಚಿ, ದೇವಸ್ಥಾನದ ಎದುರು ಮೇಲ್ಟಾವಣಿ ಮತ್ತು ಟೈಲ್ಸ್, ನೈವೇದ್ಯ ಶಾಲೆ ನವೀಕರಣ, ತೀರ್ಥ ಭಾವಿ ನವೀಕರಣ, ನಾಗಸಾನಿಧ್ಯ, ಭದ್ರತಾ ಕೊಠಡಿ, ಯಾಗಶಾಲೆ, ಪರಿವಾರ ದೈವಸ್ಥಾನಗಳ ನವೀಕರಣ, ಸೇವಾಕಚೇರಿ, ಆವರಣ ಗೋಡೆ, ಸಿಸಿ ಕ್ಯಾಮೆರಾ ಅಳವಡಿಕೆ, ಅತಿಥಿಗೃಹ, ಪಾಕಶಾಲೆ, ಶೌಚಾಲಯ ಇತ್ಯಾದಿ ಮೂಲ ಸೌಕರ್ಯಗಳನ್ನು ರಚಿಸಲಾಗಿದೆ ಬಳಿಕ ದಿನಾಂಕ 14.02.2025 ರಿಂದ 20.02.2025ರ ತನಕ ಅಷ್ಟಬಂಧ-ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ, ಗೆಂಡಸೇವೆ ಕಾರ್ಯಗಳು ಸಂಪನ್ನಗೊಂಡಿವೆ.
ತಾವು ನೀಡಿದ ದೇಣಿಗೆಯಿಂದಾಗಿ ಈ ಮೇಲಿನ ಕಾರ್ಯಗಳು ಸಂಪನ್ನಗೊಂಡಿವೆ. ಭಕ್ತಾದಿಗಳಾದ ತಾವು ಈ ಪುಣ್ಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನೀಡಿದ ತನು ಮನ ಧನ ಸೇವೆಗಾಗಿ ಶ್ರೀದೇವರು ತಮ್ಮನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
ವಿ. ಸೂ: 2026 ಫೆಬ್ರವರಿ ತಿಂಗಳಲ್ಲಿ ನಡೆಯುವ ಹಾಲುಹಬ್ಬದ ವರೆಗೆ ಅಭಿವೃದ್ಧಿ ಕಾರ್ಯಗಳಿಗೆ ತಾವು ನೀಡಿದ ದೇಣಿಗೆ (ರೂ.25,000/ಕ್ಕಿಂತ ಮೇಲ್ಪಟ್ಟ ಮೊಬಲಗು) ವಿವರವನ್ನು ಶ್ರೀ ಕ್ಷೇತ್ರದಲ್ಲಿ ಶಿಲಾಫಲಕದಲ್ಲಿ ದಾಖಲೆ ಮಾಡಲಿದ್ದೇವೆ
ಫೆ.15ರಂದು ಶಿವರಾತ್ರಿ ಪೂಜೆ
ಬೆಳಿಗ್ಗೆ 9:00 ಗಂಟೆಗೆ : ಶತರುದ್ರಾಭಿಷೇಕ
ಸೇವಾಕರ್ತರು :ಶ್ರೀಮತಿ ಯಶೋಧ ಮತ್ತು ಶ್ರೀ ಬಿ. ಶ್ರೀನಿವಾಸ್ ಶೆಟ್ಟಿಗಾರ್, ರಂಗನಕೇರಿ ಬಾರ್ಕೂರು
ಮಧ್ಯಾಹ್ನ 3:00 ಗಂಟೆಗೆ : ಭಜನಾ ಕಾರ್ಯಕ್ರಮ
ರಾತ್ರಿ 7:00 ಗಂಟೆಗೆ : ರಂಗ ಪೂಜೆ
ರಾತ್ರಿ 8:00 ಗಂಟೆಗೆ : ಪ್ರಸಾದ ವಿತರಣೆ
ವಿಳಾಸ: ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು – 576210,ಉಡುಪಿ ಜಿಲ್ಲೆ
9972780262 9448857459/9449084136
ದೇಣಿಗೆಯಾಗಿ ಬ್ಯಾಂಕ್ ವಿವರ:
A/C NO:0466101177250.
Sri Brahmalinga veerabhadra Sri Durga parameshwari temple.
IFSC code:CNRB0000466.
Branch name: Canara Bank varamballi






