ಬ್ರಹ್ಮಾವರ: ಸಾಹೇಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
Views: 1367
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕಿನ ಸಾಹೇಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿ 4ರಂದು ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ಇಲ್ಲಿಗೆ ಸಮೀಪದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಂದಾರ್ತಿ ಮೆಸ್ಕಾಂ ಲೈನ್ ಮ್ಯಾನ್ ಮಂಜುನಾಥ್ ಶೆಟ್ಟಿಗಾರ್ ಅವರ ಪತ್ರ ಅವರ ಪುತ್ರ ವಂಶಿತ್ ( 17) ಎಂದು ತಿಳಿದುಬಂದಿದೆ.
ಜ. 4 ರಂದು ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಸಂಬಂಧಿಕರು ಸ್ಕೂಟಿಯಲ್ಲಿ ಬಂದು ಅವರ ಮನೆಯಲ್ಲಿ ನಿಲ್ಲಿಸಿ ಎಲ್ಲರೂ ಒಟ್ಟಿಗೆ ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಆನಂತರ ವಂಶಿತ್ ಸ್ಕೂಟಿಯನ್ನು ಚಲಾಯಿಸಿಕೊಂಡು ಹೊರಗಡೆ ಹೋದಾಗ ಗಾಡಿ ಕೆಟ್ಟು ಹೋಗಿದ್ದರಿಂದ ಭಯಗೊಂಡ ವಂಶಿತ್ ಮನೆಯವರು ಜೋರು ಮಾಡಬಹುದು ಎಂಬ ಭಯದಿಂದ ಅಪರಾಹ್ನ 1 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮನೆಯವರು ಕಾರ್ಯಕ್ರಮ ಮುಗಿಸಿ ಬಂದಾಗ ವಂಶಿತ್ ಮನೆಯಲ್ಲಿ ಇಲ್ಲದೇ ಇರುವುದನ್ನು ತಿಳಿದು ಹುಡುಕಾಟ ಆರಂಭಿಸಿದ್ದರು. ಸಂಜೆಯವರೆಗೆ ಹುಡುಕಾಟ ನಡೆಸಿದ ಮನೆಯವರು ಅಲ್ಲಿಯೇ ಹತ್ತಿರ ನಿರ್ಮಾಣಗೊಳ್ಳುತ್ತಿರುವ ರೆಸಾರ್ಟ್ ಗುಂಡಿಯ ಮೇಲ್ಭಾಗದಲ್ಲಿ ವಂಶಿತ್ ಚಪ್ಪಲಿ ಮತ್ತು ಶರ್ಟ್ ಪತ್ತೆೆಯಾಗಿದೆೆ. ಗುಂಡಿಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇಂದು ವಿದ್ಯಾರ್ಥಿಯ ಅಂತ್ಯ ಸಂಸ್ಕಾರದಲ್ಲಿ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್, ಶಾಲಾ ಆಡಳಿತ ಮಂಡಳಿಯವರು, ಗಣ್ಯರು ಎಲ್ಲರೂ ಸೇರಿ ವಿದ್ಯಾರ್ಥಿಗೆ ಅಂತಿಮ ನಮನ ಸಲ್ಲಿಸಿ ಶವಸಂಸ್ಕಾರ ನಡೆಸಲಾಯಿತು.






