ಇತರೆ

ವಾಕಿಂಗ್‌ಗೆಂದು ಹೋಗಿದ್ದ ಮಂಗಳೂರಿನ ವ್ಯಕ್ತಿ ನಾಪತ್ತೆ

Views: 23

ಕನ್ನಡ ಕರಾವಳಿ ಸುದ್ದಿ: ಮಂಗಳೂರು ಮಣ್ಣಗುಡ್ಡೆ ಗಾಂಧಿ ಪಾರ್ಕ್ ಗೆ ವಾಕಿಂಗ್ ಗೆ ಎಂದು ಹೋಗಿದ್ದ ವಿನಯ ರಮೇಶ್ ಹುಲ್ಮನಿ (34) ನಾಪತ್ತೆಯಾಗಿದ್ದಾರೆ.

ಜ.1ರಂದು ಬೆಳಗ್ಗೆ 8 ಗಂಟೆಗೆ ಮಣ್ಣಗುಡ್ಡೆ ಗಾಂಧಿನಗರ ಬ್ಯಾಂಕ್ ಕ್ವಾಟ್ರಸ್ ನಿಂದ ವಾಕಿಂಗ್ ಗೆ ಹೋಗಿದ್ದರು. ರೈಲ್ವೇ ಸ್ಟೇಷನ್, ದೇವಸ್ಥಾನ ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ.

ಸುಮಾರು 5.2 ಅಡಿ ಎತ್ತರ, ದೃಢಕಾಯ, ಎಣ್ಣೆ ಕಪ್ಪು ಮೈಬಣ್ಣ ಕುತ್ತಿಗೆಯಲ್ಲಿ ಚಿನ್ನದ ಸರ ಇತ್ತು. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದು, ಮನೆಯಿಂದ ತೆರಳುವಾಗ ಆಕಾಶ ನೀಲಿ ಬಣ್ಣದ ಟೀ-ಶರ್ಟ್ ಮತ್ತು ಕಡು ನೀಲಿ ನೈಟ್ ಪ್ಯಾಂಟ್ ಧರಿಸಿದ್ದರು. ಈ ಚಹರೆಯ ವ್ಯಕ್ತಿ ಪತ್ತೆಯಾದಲ್ಲಿ ಬರ್ಕೆ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Related Articles

Back to top button
error: Content is protected !!